.jpg)
ಮಂಗಳೂರು: ಗ್ರಾಹಕರ ವಿಶ್ವಾಸದಿಂದ 'ಡ್ರೀಮ್ ಡೀಲ್ ಗ್ರೂಪ್' ಮತ್ತಷ್ಟು ವಿಸ್ತಾರ; ಇ-ಕಾಮರ್ಸ್‌ಗೂ ಲಗ್ಗೆ!
ಮಂಗಳೂರು: ಕರಾವಳಿಯಲ್ಲಿ ಭಾರೀ ಜನಪ್ರಿಯತೆ ಪಡೆದ ʼಡ್ರೀಮ್ ಡೀಲ್
ಗ್ರೂಪ್ʼನ ಉಳಿತಾಯ ಯೋಜನೆ ಈಗ ರಾಜ್ಯ ಮಟ್ಟದಲ್ಲಿಯೂ ಮನೆಮಾತಾಗಿದೆ. ತಮ್ಮ ತಂಡದ ಸದಸ್ಯರ ಪರಿಶ್ರಮದಿಂದ
ಡ್ರೀಮ್ ಡೀಲ್ ಇದೀಗ ರಾಜ್ಯದ 15ಕ್ಕೂ ಹೆಚ್ಚು ಕಡೆಗಳಲ್ಲಿ ಶಾಖೆಗಳನ್ನು ತೆರೆಯುವಂತೆ ಮಾಡಿದೆ.
ಮೈಸೂರು, ಚಿಕ್ಕಮಗಳೂರು, ಬೆಳ್ತಂಗಡಿ, ಬೆಂಗಳೂರು,
ಭಟ್ಕಳ, ಕೋಲಾರ, ದಾವಣಗೆರೆ ಹೀಗೆ 15 ಕಡೆಗಳಲ್ಲಿ ʼಡ್ರೀಮ್ ಡೀಲ್ ಗ್ರೂಪ್ʼ ತನ್ನ ಶಾಖೆಯನ್ನು
ಹೊಂದಿದೆ. ವಿವಿಧ ಉಳಿತಾಯ ಯೋಜನೆ ಮೂಲಕ ತನ್ನ ಗ್ರಾಹಕರಿಗೆ ಬಂಪರ್ ಡ್ರಾ ಅಷ್ಟೇ ಅಲ್ಲದೇ ಅದ್ಭುತ
ಉಳಿತಾಯ ಯೋಜನೆಯನ್ನು ಪರಿಚಯಿಸುತ್ತಿದೆ. ಈಗಾಗಲೇ ಹಲವು ಹಂತದ ಉಳಿತಾಯ ಯೋಜನೆಗಳ ಡ್ರಾ ಕೂಟವನ್ನು
ಪ್ರತಿ ತಿಂಗಳು ಯಶಸ್ವಿಯಾಗಿ ನಡೆಸುತ್ತಾ ಬಂದಿದೆ.
ಇತ್ತೀಚೆಗೆ ನಡೆದ ಬೆಳವಣಿಗೆಯೊಂದು ಡ್ರೀಮ್ ಡೀಲ್ ಗ್ರೂಪ್ ಕುರಿತಂತೆ
ಜನರಿಗೆ ಒಂದಿಷ್ಟು ಗೊಂದಲ ಉಂಟಾದರೂ, ʼಡ್ರೀಮ್ ಡೀಲ್ ಗ್ರೂಪ್ʼ ತನ್ನ ಗ್ರಾಹಕರ ವಿಶ್ವಾಸವನ್ನ
ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದಾಗ್ಯೂ ಸಂಸ್ಥೆ ತನ್ನ ಶಾಖೆಗಳನ್ನು ಹಾಗೂ ಗ್ರಾಹಕರನ್ನ ವಿಸ್ತರಿಸುವಲ್ಲಿ
ಯಶಸ್ವಿಯಾಗಿದೆ ಎಂದು ʼಡ್ರೀಮ್ ಡೀಲ್ ಗ್ರೂಪ್ʼ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಸುಹೇಲ್
ತಿಳಿಸಿದ್ದಾರೆ.
ಸಂಸ್ಥೆಯು ಯಾವುದೇ ಕಾನೂನು ಪ್ರಕ್ರಿಯೆ ನೋಟೀಸ್ ಆಗಲೀ, ತನಿಖೆಯ ಆರೋಪಗಳನ್ನು
ಎದುರಿಸುತ್ತಿಲ್ಲ. ಸಂಸ್ಥೆಗೆ ಸಂಬಂಧಿಸಿದ ಎಲ್ಲ ಕಾನೂನಾತ್ಮಕ ಪತ್ರಗಳನ್ನು ಸಂಸ್ಥೆ ಹೊಂದಿರುವುದು
ಡ್ರೀಮ್ ಡೀಲ್ ಗ್ರೂಪ್‌ನ ವಿಶ್ವಾಸಾರ್ಹತೆಗೆ ಸಾಕ್ಷಿ. ಇದು ಬೇರೆ ಯಾವುದೇ ಸ್ಕೀಮ್‌ಗಳನ್ನ ಹೋಲುವುದಿಲ್ಲ,
ಅದನ್ನು ಅನುಸರಿಸುವುದು ಡ್ರೀಮ್ ಡೀಲ್‌ನ ಉದ್ದೇಶವೂ ಅಲ್ಲ. ಜನರನ್ನು ಸೇರಿಸಿಕೊಂಡು ಅವರಿಗೊಂದು
ಉಳಿತಾಯ ಯೋಜನೆಯ ಮೂಲಕ ಸಂಸ್ಥೆಯನ್ನು ಕಟ್ಟುವುದಾಗಿದೆ ಎಂದು ಡ್ರೀಮ್ ಡೀಲ್ ಗ್ರೂಪ್ ಮುಖ್ಯಸ್ಥರು
ʼದಿ ನ್ಯೂಸ್ ಅವರ್ʼಗೆ ತಿಳಿಸಿದ್ದಾರೆ.