-->
ಉಪ್ಪಿನಂಗಡಿ: ನಿರ್ಮಾಣ ಹಂತದ ಗ್ರಂಥಾಲಯ ಕಟ್ಟಡದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ!

ಉಪ್ಪಿನಂಗಡಿ: ನಿರ್ಮಾಣ ಹಂತದ ಗ್ರಂಥಾಲಯ ಕಟ್ಟಡದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ!

 


ಉಪ್ಪಿನಂಗಡಿ: ಇಲ್ಲಿನ ಬಸ್‌ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯತ್‌ ಅಧೀನದ ಗ್ರಂಥಾಲಯ ಕಟ್ಟಡದಲ್ಲಿ ಅಪರಿಚಿತ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಆಗಮಿಸಿದ್ದು, ತನಿಖೆ ಕೈಗೆತ್ತಿಕೊಂಡಿದ್ದಾರೆ. ಮೃತಪಟ್ಟ ವ್ಯಕ್ತಿಯು ಸುಮಾರು 40-45 ವರ್ಷ ಪ್ರಾಯದವರಾಗಿದ್ದು, ಕಾರ್ಮಿಕನಾಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇಂದು ಬೆಳಗ್ಗೆ ನಿರ್ಮಾಣ ಹಂತದ ಕಟ್ಟಡಕ್ಕೆ ವ್ಯಕ್ತಿಯೋರ್ವರು ನೀರು ಬಿಡಲೆಂದು ಆಗಮಿಸಿದ್ದು, ಈ ಸಂದರ್ಭ ಕಟ್ಟಡದ ಒಳಭಾಗದಲ್ಲಿ ಮೃತದೇಹ ಇರುವುದು ಪತ್ತೆಯಾಗಿದೆ. ಕಪ್ಪು ಟೀಶರ್ಟ್‌ ತೊಟ್ಟಿರುವ ಗಂಡಸಿನ ಮೃತದೇಹ ಇದಾಗಿದ್ದು, ಸ್ಥಳದಲ್ಲಿ ಆತನಿಗೆ ಸೇರಿದ ಮೊಬೈಲ್‌, ಬ್ಯಾಗ್‌ ಕೂಡಾ ಪತ್ತೆಯಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಆಗಮಿಸಿರುವ ಉಪ್ಪಿನಂಗಡಿ ಪೊಲೀಸರು ವ್ಯಕ್ತಿಯ ಗುರುತು ಪತ್ತೆಗೆ ಮುಂದಾಗಿದ್ದಾರೆ.

Ads on article

Advertise in articles 1

advertising articles 2

Advertise under the article