.jpg)
ಕಡಬ: ಮನೆ ಧ್ವಂಸ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಕೆಲಸದಾಕೆಯ ಮನೆ ಕೆಡವಿ ಹಾಕಿದರೇ ಎಸಿ ಕುರಿಯನ್?
ಕಡಬ: ಕಳೆದ ಬುಧವಾರ
ಬುಲ್ಡೋಜರ್ ಮೂಲಕ ಕಡಬ ತಾಲೂಕಿನ ಕೌಕ್ರಾಡಿಯಲ್ಲಿರುವ ವೃದ್ಧ ದಂಪತಿಯ ಮನೆಯೊಂದನ್ನ ಹೈಕೋರ್ಟ್ ಆದೇಶದಂತೆ
ಕಡವಿ ಹಾಕಲಾಗಿತ್ತು. ಆದರೆ ಇದರ ಹಿಂದೆ ಉದ್ಯಮಿಯೋರ್ವರ ಕೈವಾಡವಿದ್ದು, ತನ್ನ ಜೊತೆಗೆ ಲೈಂಗಿಕ ಕ್ರಿಯೆಗೆ
ಸಹಕರಿಸದ ಕಾರಣಕ್ಕಾಗಿ ಎಸಿ ಕುರಿಯನ್ ಎಂಬಾತ ನನ್ನ ತಂದೆ ತಾಯಿ ನೆಲೆಸಿದ್ದ ಮನೆಯನ್ನ ಧ್ವಂಸಗೊಳಿಸಿರುವುದಾಗಿ
ಮನೆ ಕಳೆದುಕೊಂಡ ವೃದ್ಧ ದಂಪತಿಯ ಮಗಳು ಎಸಿ ಕುರಿಯನ್ ವಿರುದ್ಧ ಲೈಂಗಿಕ ಕಿರುಕುಳದ ದೂರನ್ನ ನೀಡಿದ್ದಾರೆ.
ಮಹಿಳೆ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
4 ವರ್ಷಗಳ ಹಿಂದೆ
ಸಂತ್ರಸ್ತೆ ತನ್ನ ಪತಿ ಜೊತೆಗೆ ಬೆಳ್ತಂಗಡಿಯ ಶಿಬಾಜೆಯ ಆಕೋಟೇಜಲ್ ಎಂಬಲ್ಲಿ ಎಸಿ ಕುರಿಯನ್ ಮನೆಯಲ್ಲಿ
ಕೆಲಸ ಮಾಡುತ್ತಿದ್ದರು. ಪತಿ, ಪತ್ನಿಗೆ ಅಲ್ಲೇ ನೆಲೆಸಲು ಮನೆಯನ್ನು ನೀಡಲಾಗಿತ್ತು. ಆದರೆ ಎಸಿ ಕುರಿಯನ್
ಚಹಾ, ತಿಂಡಿಯನ್ನು ತೆಗೆದುಕೊಂಡು ಹೋದಾಗ ಮೈಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ
ಬೇಸತ್ತು ಸಂತ್ರಸ್ತೆ ಅಲ್ಲಿಂದ ಕೆಲಸ ಬಿಟ್ಟು ಬೇರೆಡೆಗೆ ತೆರಳಿದ್ದರು. ಈ ಸಮಯದಲ್ಲೇ ಎಸಿ ಕುರಿಯನ್
ಮನೆ ಧ್ವಂಸ ಮಾಡುವುದಾಗಿ ಬೆದರಿಸಿದ್ದನು ಎಂದು ದೂರಲಾಗಿದೆ.
ತನ್ನ ಮೇಲಿನ
ದ್ವೇಷದಿಂದ ಎಸಿ ಕುರಿಯನ್ ತಂದೆ ತಾಯಿ ನೆಲೆಸಿದ್ದ ಕಡಬದ ಕೌಕ್ರಾಡಿಯ ಮನೆ ಧ್ವಂಸಗೊಳಿಸಿದ್ದಾಗಿ
ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪುತ್ತೂರು ಮಹಿಳಾ ಠಾಣೆಯ ಪೊಲೀಸರು ಆರೋಪಿ
ಬಂಧನಕ್ಕೆ ಮುಂದಾಗಿದ್ದಾರೆ.