-->
PUTTUR: ಬೃಹತ್ ಗಾತ್ರದ ಹೆಬ್ಬಾವನ್ನ ಹಿಡಿದ ವೀರ ಮಹಿಳೆ!!

PUTTUR: ಬೃಹತ್ ಗಾತ್ರದ ಹೆಬ್ಬಾವನ್ನ ಹಿಡಿದ ವೀರ ಮಹಿಳೆ!!

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಳ್ಯದ ಗಡಿಪ್ರದೇಶವೊಂದರಲ್ಲಿ ಮಹಿಳೆಯೊಬ್ಬರು ಬೃಹತ್ ಗಾತ್ರದ ಹೆಬ್ಬಾವೊಂದನ್ನು ಹಿಡಿದ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ. ಗಂಡಸಿಗೂ ಇರದ ಧೈರ್ಯ ಆ ವೀರ ಮಹಿಳೆ ಶೋಭಕ್ಕ ಎಂಬವರು ಹೆಬ್ಬಾವನ್ನ ಹಿಡಿಯುವ ಮೂಲಕ ತೋರಿಸಿ ಕೊಟ್ಟಿದ್ದಾರೆ. 


ಈ ಹೆಬ್ಬಾವಿಗೆ `ಇಂಡಿಯನ್ ರಾಕ್ ಪೈತಾನ್' ಎಂದು ಎಂದು ಕರೆಯಲಾಗುತ್ತೆ. ಸದ್ಯ ಕರಾವಳಿ ಭಾಗದಲ್ಲಿ ಈ ಹೆಬ್ಬಾವಿಗೆ `ಕೋಳಿ ಮರ್ಲೆ' ಎಂಬ ತುಳು ಪದವನ್ನ ಬಳಸಲಾಗುತ್ತೆ. ಶೋಭ ಅವರು ಹೆಬ್ಬಾವನ್ನ ಹಿಡಿಯುವ ಸಂದರ್ಭ ಯಾವುದೇ ಭಯವಿಲ್ಲದೆ ನಾಜೂಕಾಗಿ ಹಿಡಿದು ಗೋಣಿ ಚೀಲಕ್ಕೆ ತುಂಬಿಸುವ ಸಾಹಸಿ ವೀಡಿಯೋ ಇದೀಗ ಕರಾವಳಿ ಭಾಗದಲ್ಲಿ ಭಾರೀ ವೈರಲ್ ಆಗಿದೆ. 

ಆದ್ರೆ ಹೆಬ್ಬಾವನ್ನ ನೋಡಲು ಬಂದಿದ್ದ ಅದೆಷ್ಟೋ ಮಂದಿ ಹಿಡಿಯಲು ಮುಂದಾಗಿಲ್ಲ. ಬದಲಾಗಿ ಅಲ್ಲೇ ಇದ್ದ ಮುಸ್ಲಿಂ ಸಹೋದರ ಬಶೀರ್ ಎಂಬವರಲ್ಲಿ ಗೋಣಿ ಹಿಡಿಯಿರಿ ಎಂದು ತುಳು ಭಾಷೆಯಲ್ಲಿ ಶೋಭಕ್ಕ ಹೇಳಿದಾಗ ಸಹಾಯಕ್ಕೆ ಬಂದಿದ್ದಾರೆ. ಆದ್ರೆ ಬಶೀರ್ ಅವ್ರು ಕೂಡ ಹೆಬ್ಬಾವನ್ನ ಮುಟ್ಟಲು ಧೈರ್ಯವಿಲ್ಲದೆ ಹಿಂದೆ ಸರಿದಿದ್ದಾರೆ. ಕೊನೆಗೆ ಶೋಭಾ ಅವರು ಹೆಬ್ಬಾವನ್ನ ಸುರಕ್ಷಿತವಾಗಿ ಹಿಡಿದು ಗೋಣಿ ಚೀಲಗೆ ತುಂಬಿಸಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

Ads on article

Advertise in articles 1

advertising articles 2

Advertise under the article