.jpg)
ಬೆಳ್ತಂಗಡಿ: ಸುನ್ನತ್ ಕುರಿತ ಹೇಳಿಕೆ; ಕಿಡಿಗೇಡಿಗಳಿಂದ ವಿಶಿಷ್ಟ ರೀತಿಯಲ್ಲಿ ಟ್ರೋಲ್‌ಗೆ ಒಳಗಾದ ಬಿಜೆಪಿ ಶಾಸಕ!
ಬೆಳ್ತಂಗಡಿ:
ಮುಸ್ಲಿಮರ ಸುನ್ನತಿ ಬಗ್ಗೆ ಮಾತನಾಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿಕೆಗೆ ಜಾಲತಾಣದಲ್ಲಿ
ಇದೀಗ ವಿಶಿಷ್ಟ ರೀತಿಯ ರಿವೇಂಜ್ ಆದಂತಿದೆ. ಶಾಸಕರ ಎಡಿಟ್ ಮಾಡಿದ ಚಿತ್ರ ಹರಿದಾಡುತ್ತಿದ್ದು, ಹರೀಶ್
ಪೂಂಜಾ ಅವರನ್ನು ಸುನ್ನತಿ ಕ್ರಮದ ನಂತರ ಧರಿಸುವ ಉಡುಪಿನಲ್ಲಿ ಇರುವಂತೆ ಚಿತ್ರಿಸಲಾಗಿದೆ. ಸುನ್ನತ್
ಮಾಡಿದ ರೀತಿಯಲ್ಲಿ ಹರೀಶ್ ಪೂಂಜ ಫೋಟೋ ವೈರಲ್ ಮಾಡಲಾಗಿದೆ. ಹರ್ಷದೇವ್ ಹೆಸರಿನಲ್ಲಿ ಕಿಡಿಗೇಡಿಗಳು
ಬಿಜೆಪಿ ಶಾಸಕರನ್ನ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.
2 ದಿನಗಳ ಹಿಂದೆ
ಬೆಳ್ತಂಗಡಿಯಲ್ಲಿ ನಡೆದ ದೀಪಾವಳಿ ದೋಸೆ ಹಬ್ಬದಲ್ಲಿ ಮುಸ್ಲಿಮರ ಸಾಂಪ್ರದಾಯಿಕ ಸುನ್ನತಿ ಬಗ್ಗೆ ಹರೀಶ್
ಪೂಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. “ನಮ್ಮ ಕಡೆಯ ಉಸಿರು ಇರುವವರೆಗೂ ಹಿಂದುತ್ವವೇ ಬದುಕು ಎಂಬ
ರೀತಿಯ ರಾಜಕಾರಣ ಮಾಡದಿದ್ದರೆ, ಮುಂದೊಂದು ದಿನ ನಾವು ಸುನ್ನತ್ ಮಾಡಿಕೊಳ್ಳಬೇಕಾದ ಸಂದರ್ಭ ಬರಬಹುದು.
ಆದ್ದರಿಂದ ನಾವು ಹಿಂದುತ್ವವನ್ನು ಮೈಗೂಡಿಸಿಕೊಂಡು ಕೆಲಸ ಮಾಡಬೇಕು” ಎಂದು ಸುನ್ನತ್ ವಿಚಾರವಾಗಿ ಹೇಳಿಕೆ
ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈ ಕಾರ್ಯಕ್ರಮದ ವೇದಿಕೆಯಲ್ಲಿ ಹಿಂದುತ್ವ ಪರ ಹೋರಾಟಗಾರ,
ರೌಡಿಶೀಟರ್ ಪುನೀತ್ ಕೆರೆಹಳ್ಳಿ, ನೂತನ ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಸಹಿತ
ಹಲವರು ಹಾಜರಿದ್ದರು.
ಇದನ್ನೇ ಟ್ರೋಲ್
ಮಾಡಿದ ಕಿಡಿಗೇಡಿಗಳು ಸುನ್ನತ್ ನಂತರ ಮುಸ್ಲಿಮರು ಧರಿಸುವ ಲುಂಗಿಯಲ್ಲಿ ಹರೀಶ್ ಪೂಂಜಾರ ಫೋಟೋವನ್ನಿಟ್ಟು
ಎಡಿಟ್ ಮಾಡಿ ಹರಿಯಬಿಟ್ಟಿದ್ದಾರೆ. ಕಳೆದ ಬಾರಿ ಸುರತ್ಕಲ್ ಕ್ಷೇತ್ರ ವ್ಯಾಪ್ತಿಯ ಅಡ್ಡೂರು ಪ್ರದೇಶವನ್ನು
ಡಾ. ಭರತ್ ಶೆಟ್ಟಿ ʼಪಾಕಿಸ್ತಾನʼಕ್ಕೆ ಹೋಲಿಸಿ ಇದೇ ರೀತಿಯ ಟ್ರೋಲ್‌ಗೆ ಗುರಿಯಾಗಿ ಅಪಹಾಸ್ಯಕ್ಕೆ
ಒಳಗಾಗಿದ್ದರು.