
PUTTUR: ನಾಳೆ ಪುತ್ತೂರಿನಲ್ಲಿ ಅಶೋಕ ಜನ-ಮನ...
Friday, November 1, 2024
ಈ ಬಾರಿ 12ನೇ ವರ್ಷದ ಕಾರ್ಯಕ್ರಮ ನಡೆಯಲಿದ್ದು, ಸುಮಾರು 75,000 ಮಂದಿಗೆ ವಸ್ತ್ರ ವಿತರಣೆಗೆ ತಯಾರಿಯಾಗಿದೆ. ಮಹಿಳೆಯರಿಗೆ ಸೀರೆ ವಿತರಣೆ, ಮಕ್ಕಳಿಗೆ ಮತ್ತು ಪುರುಷರಿಗೆ ಬೆಡ್ ಶೀಟ್ ವಿತರಣೆ ನಡೆಯಲಿದೆ.
ಮಧ್ಯಾಹ್ನ ಸಹಭೋಜನದ ವ್ಯವಸ್ಥೆಯನ್ನೂ ಮಾಡಲಾಗಿದೆ. ಜತೆಗೆ ಗೂಡು ದೀಪ ಸ್ಪರ್ಧೆಯನ್ನೂ ಆಯೋಜಿಸಲಾಗಿದ್ದು, ಈಗಾಗಲೇ ಸುಮಾರು 500 ಮಂದಿ ನೋಂದಾಯಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 7,500 ರೂ., ತೃತೀಯ 5 ಸಾವಿರ ರೂ. ಬಹುಮಾನ ದೊರೆಯಲಿದೆ.
ಇನ್ನು ಈ ಕಾರ್ಯಕ್ರಮಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ. ಹಾಗಾಗಿ ಪುತ್ತೂರಿನ ಕೊಂಬೆಟ್ಟು ಮೈದಾನ ಝಗಮಗಿಸುತ್ತಿದೆ.