-->
PUTTUR: ಸಾಮಾಜಿಕ ಕಾರ್ಯಕರ್ತ ಬಿ.ಎಚ್.ರಝಾಕ್ ಬಪ್ಪಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ..

PUTTUR: ಸಾಮಾಜಿಕ ಕಾರ್ಯಕರ್ತ ಬಿ.ಎಚ್.ರಝಾಕ್ ಬಪ್ಪಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ..


ಪುತ್ತೂರು: ಸಾಮಾಜಿಕ ಕಾರ್ಯಕರ್ತ ಬಿ.ಎಚ್.ರಝಾಕ್ ಬಪ್ಪಳಿಗೆ ಅವರು ಈ ಸಾಲಿನ ಪುತ್ತೂರು ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪರಸ್ಪರ ಸ್ನೇಹ, ಶಾಂತಿ ಸೌಹಾರ್ದತೆಯನ್ನು ಪುತ್ತೂರಿನ ಎಲ್ಲಾ ಧರ್ಮದ ಜನರನ್ನು ಒಗ್ಗೂಡಿಸುತ್ತಾ ಮುನ್ನಡೆದ ವ್ಯಕ್ತಿತ್ವ ರಝಾಕ್ ಬಿ.ಎಚ್. ಬಪ್ಪಳಿಗೆ ಅವರದ್ದು. 

ಪ್ರಾಥಮಿಕ ಶಿಕ್ಷಣವನ್ನು ದ.ಕ.ಜಿ.ಪ.ಹಿ.ಪ್ರಾ. ಶಾಲೆ ರಾಗಿಕುಮೇರಿ ಬಪ್ಪಳಿಗೆ ಶಾಲೆಯಲ್ಲಿ ಪಡೆದ ಇವರು, ಬಳಿಕ ಪ್ರೌಢ ಶಾಲಾ ಶಿಕ್ಷಣವನ್ನು ಜ್ಯೂನಿಯ‌ರ್ ಕಾಲೇಜ್‌ನಲ್ಲಿ ಮುಗಿಸಿದರು. ತದನಂತರ ಕೃಷಿ ಹಾಗೂ ತರಕಾರಿ ಉತ್ಪನ್ನಗಳ ಮಾರಾಟದಲ್ಲಿ ತಂದೆಯೊಂದಿಗೆ ಕೈ ಜೋಡಿಸಿದರು. 2001ನೇ ಇಸವಿಯಿಂದ ಕ್ರೀಡಾ ಸಾಮಾಗ್ರಿಗಳ ಮಳಿಗೆಯನ್ನು ಪುತ್ತೂರಿನಲ್ಲಿ ಆರಂಭಿಸಿದರು. ಯುವಕರೊಂದಿಗೆ ಉತ್ತಮ ಬಾಂಧವ್ಯದಲ್ಲಿ ವಿವಿಧ ಸೌಹಾರ್ದ ಕ್ರೀಡಾಕೂಟಗಳನ್ನು ನಡೆಸುವಲ್ಲಿ ಪುತ್ತೂರಿನಲ್ಲಿ ಯಶಸ್ವಿಯನ್ನು ಕಂಡರು. ಕಳೆದ 15 ವರ್ಷಗಳಿಂದ ಪುತ್ತೂರಿನ ಸೌಹಾರ್ದತೆಗಾಗಿ ಅಮರ್ ಅಕ್ಟರ್ ಅಂತೋನಿಯೆಂಬ ಅಂಡರ್‌ಆರ್ಮ್ ಕ್ರೀಡಾಕೂಟವನ್ನು ನಡೆಸಿ ಸೌಹಾರ್ದತೆಯನ್ನು ಪುತ್ತೂರಿನಲ್ಲಿ ಎತ್ತಿ ಕಟ್ಟಿದರು.  2001ರಲ್ಲಿ ಬ್ಯಾರಿ ಸಾಂಸ್ಕೃತಿಕ ಕಾರ್ಯಕ್ರಮದ ದಫ್ ಕಲೆಯನ್ನು ರಾಜ್ಯದ ವಿವಿಧ ಭಾಗದಲ್ಲಿ ತಮ್ಮ ತಂಡವನ್ನು ರಚಿಸಿ ಪ್ರಶಸ್ತಿಗಳನ್ನು ಪಡೆದವರು. ಕಲಾ ಸಾಂಸ್ಕೃತಿಕ ಮಂದಿರ ಮೈಸೂರು ವಿಭಾಗದಲ್ಲೂ ಕೂಡ ಪ್ರಶಸ್ತಿಯನ್ನು ಪಡೆದಿದ್ದಾರೆ. ರೈ ಚಾರಿಟೇಬಲ್ ಟ್ರಸ್ಟ್‌ನ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

ಪುತ್ತೂರಿನ ಹಲವಾರು ರೋಗಿಗಳ ಪಾಲಿಗೆ ಸಹಾಯ ನೀಡಿರುವ ಇವರು, ಪುತ್ತೂರಿನಲ್ಲಿ ಮರಣ ಹೊಂದಿದ ಅನಾಥ ಮೃತದೇಹವನ್ನು ತಮ್ಮದೇ ಖರ್ಚು ವೆಚ್ಚದಲ್ಲಿ ದಫನ ಮಾಡಿದ್ದಾರೆ. ಬಡ ಹೆಣ್ಣುಮಕ್ಕಳ ಕಲ್ಯಾಣಕ್ಕೆ ಸಹಕಸಿದ್ದಾರೆ. ರಕ್ತದಾನ ಶಿಬಿರದಲ್ಲಿ ಹಾಗೂ ಮಧ್ಯರಾತ್ರಿಯಲ್ಲುಲೂ ಕರೆದಾಗ ಬಂದು (O Negetive) ರಕ್ತದಾನ ಮಾಡಿ ಹಲವರ ಪ್ರಾಣವನ್ನ ಉಳಿಸಿದ್ದಾರೆ.

ಪುತ್ತೂರಿನ ಕ್ರೀಡಾ ಕ್ಷೇತ್ರಗಳಲ್ಲಿ  ಅಮೆಚೂರು ಕಬಡ್ಡಿ ಅಸೋಸಿಯೇಶನ್ ಕೋಶಾಧಿಕಾರಿಯಾಗಿ ಹಾಗೂ ಸಿಟಿ ಫ್ರೆಂಡ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್‌ನ ಹಾಗೂ ಅಮರ್ ಅಕ್ಟರ್ ಅಂತೋನಿ ಇದರ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರಗಳಲ್ಲಿ 15 ವರ್ಷಗಳ ಅಮರ್-ಅಕ್ಟರ್- ಅಂತೋನಿ ಸೌಹಾರ್ದ ಕ್ರೀಡಾಕೂಟದಲ್ಲಿ ಪುತ್ತೂರು ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಪ್ರತೀ ವರ್ಷ ಪುತ್ತೂರಿನ ಮುತ್ತು ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಬೆನ್ನಿಗೆ ಸಾನಿಟೈಸರ್ ಕಟ್ಟಿ ಏಕಾಂಗಿಯಾಗಿ ಮಂದಿರ ಮಸೀದಿ, ಚರ್ಚ್, ಶಾಲಾ ಆವರಣ, ಪೇಟೆ ಆವರಣ ಸಾನಿಟೈಸರ್ ಸಿಂಪಡಿಸಿದರು. ಪುತ್ತೂರಿನ ಸಹಾಯಕ ಆಯುಕ್ತರ ಅನುಮತಿಯೊಂದಿಗೆ ಎಚ್.ಎಂ.ಸಿ. (ಹಿಂದೂ-ಮುಸ್ಲಿಂ-ಕ್ರೈಸ್ತ) ಜನ ಜಾಗೃತಿ ದಳ ಎಂಬ ಸಂಘವನ್ನು ಸ್ಥಾಪಿಸಿ ದಾನಿಗಳಿಂದ ಸಾವಿರಾರು ಮನೆಗಳಿಗೆ ಕಿಟ್‌ ಗಳನ್ನು ನೀಡಿದ್ದಾರೆ.

ಕೊರೋನಾ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಪೊಲೀಸ್ ಇಲಾಖೆ, ನಗರಸಭೆ ಹಾಗೂ ಸರಕಾರಿ ಆಸ್ಪತ್ರೆಗಳಿಗೆ ಹಾಗೂ ವಿವಿಧ ಇಲಾಖೆಗೆ ಸಾನಿಟೈಸರ್ ಕಿಟ್ ಗಳನ್ನು ನೀಡಿದ್ದಾರೆ. ಕೊರೋನಾ ಸಂದರ್ಭದಲ್ಲಿ ತನ್ನ ಸಂಸ್ಥೆಯಾದ ಸೆಂಟ್ರಲ್ ಮಾರ್ಕೆಟ್‌ ನಲ್ಲಿ ದೇಶ ಕಾಯುತ್ತಿರುವ ಭಾರತೀಯ ಸೇನೆ ತಮ್ಮ ಊರಿನಲ್ಲಿ ಇರುವಂತಹ ಸೇನೆಯವರ ಮನೆಗೆ ಒಂದು ತಿಂಗಳುಗಳ ಕಾಲ ದಿನ ಬಳಕೆಯ ವಸ್ತುಗಳನ್ನು ಉಚಿತವಾಗಿ ನೀಡಿದ್ದಾರೆ.

ತುಳುನಾಡ ಜಾನಪದ ಕ್ರೀಡೆ ಕಂಬಳ ಕೂಟದ ಇತಿಹಾಸದಲ್ಲೇ ಮೊದಲ ಬಾರಿಗೆ 8 ಫೀಟ್ ಎತ್ತರದ ಟ್ರೋಫಿಯನ್ನು ಕೊಡುಗೆಯಾಗಿ ನೀಡಿದ ವ್ಯಕ್ತಿ ರಝಾಕ್ ಬಿ.ಎಚ್. ಬಪ್ಪಳಿಗೆ. ತನ್ನ ಊರು ಬಪ್ಪಳಿಗೆ ಬಲ್ನಾಡು ರಸ್ತೆಯ ಉದ್ದಕ್ಕೂ ಪುತ್ತೂರು ನಗರಸಭೆ ಹಾಗೂ ಮೆಸ್ಕಾಂ ಇಲಾಖೆಯ ಸಹಕಾರದೊಂದಿಗೆ ನನ್ನ ಊರು ನಮ್ಮ ರಕ್ಷಣೆ ಎಂಬ ಸ್ವಚ್ಚತಾ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದಾರೆ. ಇವರ ಸೇವೆಯನ್ನ ಗುರುತಿಸಿ ದ.ಕ. ಜಿಲ್ಲೆಯ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಮಾಡಿ ಪ್ರಶಂಸಿಸಿದ್ದಾರೆ.

ಪೊಲೀಸ್ ಇಲಾಖೆ ಹಾಗೂ ಸಿಟಿ ಫ್ರೆಂಡ್ಸ್ ಆಟ್ಸ್ & ಸ್ಪೋರ್ಟ್ಸ್ ಕ್ಲಬ್ ಪುತ್ತೂರು ಜಂಟಿ ಆಶ್ರಯಲ್ಲಿ ಅಗಸ್ಟ್ 15ರಂದು ಪುತ್ತೂರಿನ ಬಸ್ ಸ್ಟ್ಯಾಂಡಿನಲ್ಲಿ ಮಾದಕ ದ್ರವ್ಯ ಮುಕ್ತ ಪುತ್ತೂರು ರಸ್ತೆ ಸುರಕ್ಷೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಜೀವ ರಕ್ಷಣೆಗಾಗಿ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ನೀಡಿ ಸಹಕಾರಿಯಾಗಿದ್ದಾರೆ. ಪುತ್ತೂರು ತಾಲೂಕಿನ 30 ಅಂಬ್ಯಲೆನ್ಸ್ ಚಾಲಕರಿಗೆ ಏಕಕಾಲದಲ್ಲಿ ಸನ್ಮಾನಿಸಿದ್ದಾರೆ. 50 ಮಾಜಿ ಸೈನಿಕರನ್ನು ಏಕ ಕಾಲದಲ್ಲಿ ಸನ್ಮಾನಿಸಿದ್ದಾರೆ. ಪುತ್ತೂರಿನ ಮೆಸ್ಕಾಂ ವಿಭಾಗದ 50ಕ್ಕೂ ಅಧಿಕ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿದ್ದಾರೆ.  (ಇವರು ಯಾವುದೇ ಮಾಧ್ಯಮದಲ್ಲಾಗಲಿ, ಪ್ರಚಾರದಲ್ಲಾಗಲಿ ಪರಿಗಣಿಸಿದವರಲ್ಲಾ) ಹಾಗಾಗಿ ಇವರು ಪುತ್ತೂರಿಗೆ ಇನ್ನೂ ಬೆಳಕಾಗಲಿ.

Ads on article

Advertise in articles 1

advertising articles 2

Advertise under the article