
SHOBHA: ಶೋಭಾ ಕರಂದ್ಲಾಜೆ ಮಟನ್ & ಚಿಕನ್ ಸೆಂಟರ್
Friday, October 18, 2024
ಕುಕನೂರು: ಕೊಪ್ಪಳ ಕುಕನೂರು ಪಟ್ಟಣದ ಚಿಕನ್, ಮಟನ್ ಮಾಂಸದಂಗಡಿ ಮಾಲಕರೊಬ್ಬರು ತಮ್ಮ ಅಂಗಡಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರನ್ನಿಟ್ಟು ಗಮನ ಸೆಳೆದಿದ್ದಾರೆ.
ಅಲ್ಲದೇ ಅವರ ಭಾವಚಿತ್ರವನ್ನು ತಮ್ಮ ಕೈಮೇಲೆ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ಕೊಪ್ಪಳ ಕುಕನೂರು ಪಟ್ಟಣದ ಬಸ್ ನಿಲ್ದಾಣದ ಬಳಿ ಅಂಗಡಿಯ ಮಾಲಕ ಖಾದಿರ್ ಬಾಬಣ್ಣ ಕಲಾಲ್ 20 ವರ್ಷಗಳಿಂದ ಸಚಿವೆ ಶೋಭಾ ಅವರ ಅಭಿಮಾನಿಯಾಗಿದ್ದಾರೆ. ಅಂಗಡಿಗೂ ಸಹ ಶೋಭಾ ಕರಂದ್ಲಾಜೆ ಮಟನ್ ಚಿಕನ್ ಸೆಂಟರ್ ಎನ್ನುವ ಬೋರ್ಡ್ ಹಾಕಿಸಿದ್ದಾರೆ.