
PUTTUR: ಬಿಲ್ಲವ ಯುವತಿಯರು, ಭಜನೆಯ ಬಗ್ಗೆ ಅವಹೇಳನ; ಸಂಜೀವ ಪೂಜಾರಿ ಬಂಧನಕ್ಕೆ ಒತ್ತಾಯ
ಪುತ್ತೂರು: ಬಿಲ್ಲವ ಯುವತಿಯರು ಮತ್ತು ಭಜನಯೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ವಿರುದ್ಧ ಹಿಂದೂ ಜಾಗರಣ ವೇದಿಕೆ ಪುತ್ತೂರಿನ ಡಿವೈಎಸ್ಪಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಿದ್ರು.
ಸಂಜೀವ ಪೂಜಾರಿ ಹಿಂದೂ ಕಾರ್ಯಕರ್ತನೋರ್ವನ ಜೊತೆ ಮಾತನಾಡಿದ ಆಡಿಯೋ ಜಿಲ್ಲೆಯಾದ್ಯಂತ ವೈರಲ್ ಆಗಿ ಕಿಚ್ಚು ಹಬ್ಬಿತ್ತು. ಭಜನೆಯಲ್ಲಿ ಪಾಲ್ಗೊಂಡ ಒಂದು ಲಕ್ಷ ಬಿಲ್ಲವ ಯುವತಿಯರು ವ್ಯಭಿಚಾರಿಗಳಾಗಿದ್ದಾರೆ ಎನ್ನುವ ಮೂಲಕ ಕಿಚ್ಚು ಹಚ್ಚಿದ್ದರು. ಇದರಿಂದ ಕೆರಳಿರುವ ಹಿಂದೂ ಪರ ಸಂಘಟನೆಗಳು ಇಂದು ಪುತ್ತೂರಿನ ಡಿವೈಎಸ್ಪಿ ಕಚೇರಿ ಮುಂಭಾಗ ನಡೆಸಿ, ತಕ್ಷಣ ಸಂಜೀವ ಪೂಜಾರಿಯನ್ನ ಬಂಧಿಸುವಂತೆ ಪಟ್ಟು ಹಿಡಿದ್ರು. ಬಂಧಿಸುವವರೆಗೂ ನಾವು ಇಲ್ಲಿಂದ ಹೋಗಲ್ಲ ಎಂದು ಹಿಂದೂ ಸಂಘಟಕರು ಪೊಲೀಸ್ ಇಲಾಖೆಗೆ ಒತ್ತಡ ಹಾಕಿದ್ರು.
ಸಂಜೀವ ಪೂಜಾರಿ ವಿರುದ್ಧ ಈಗಾಗ್ಲೇ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆದ್ರೆ ಎಫ್ ಐಆರ್ ನಲ್ಲಿ ಕ್ಷುಲ್ಲಕ ಸೆಕ್ಷನ್ ಹಾಕಿದ್ದಾರೆಂದು ಹಿಂದೂ ಸಂಘಟನೆಗಳು ಇದೇ ವೇಳೆ ಆರೋಪ ಮಾಡಿದ್ರು. ಬಳಿಕ ಪ್ರತಿಭಟನಾ ನಿರತರ ಬಳಿ ಬಂದ ಡಿವೈಎಸ್ಪಿ ಅರುಣ್ ನಾಗೇಗೌಡ, ಸಂಜೀವ ಪೂಜಾರಿಯನ್ನ ಬಂಧಿಸುವ ಭರವಸೆ ನೀಡಿದ್ರು. ಆದ್ರೂ ಪಟ್ಟು ಬಿಡದ ಹಿಂದೂ ಕಾರ್ಯಕರ್ತರು ಇಂದು ಸಂಜೆಯ ಒಳಗಡೆ ಬಂಧನ ಮಾಡಬೇಕು ಎಂದು ಒತ್ತಾಯಿಸಿದ್ರು. ಬಳಿಕ ಹಿಂಜಾವೇ ಪ್ರತಿಭಟನೆಯನ್ನ ಹಿಂಪಡೆದರು.
ಒಂದು ವೇಳೆ ಸಂಜೆಯೊಳಗಡೆ ಬಂಧಿಸದಿದ್ರೆ, ನಾಳೆ ಹಿಂದೂ ಪರ ಸಂಘಟನೆಗಳ ಸಭೆ ಕರೆಯಲಾಗುತ್ತೆ, ಅದರಲ್ಲಿ ಏನೆಲ್ಲ ನಿರ್ಣಯ ಆಗುತ್ತೋ ಅದರಂತೆ ಮುಂದುವರಿಯುತ್ತೇವೆ. ಮುಂದಕ್ಕೆ ಆಗುವ ಎಲ್ಲಾ ಘಟನೆಗಳಿಗೂ ಪೊಲೀಸರೇ ಹೊಣೆಯಾಗುತ್ತೀರಿ. ಸಾಧ್ಯವಾದ್ರೆ ಸ್ವಯಂ ಪ್ರೇರಿತ ಪುತ್ತೂರು ಬಂದ್ ಗೆ ಕರೆ ಕೊಡುವ ಬಗ್ಗೆಯೂ ಸಾಧ್ಯತೆಗಳಿವೆ ಎಂದು ಸಂಘಟಕರು ಇದೇ ವೇಳೆ ತಿಳಿಸಿದ್ರು.