PUTTUR: ಹಿಂಸಾತ್ಮಕ ರೀತಿಯಲ್ಲಿ ಗೋಸಾಟ; ಬಜರಂಗದಳ ಕಾರ್ಯಕರ್ತರಿಂದ ರಕ್ಷಣೆ
ಪುತ್ತೂರು: ಅಕ್ರಮವಾಗಿ ಆಟೋ ರಿಕ್ಷಾದಲ್ಲಿ ಗೋ ಸಾಗಾಟ ಮಾಡುತ್ತಿದ್ದುದನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿದ ಘಟನೆ ಪುತ್ತೂರಿನಲ್ಲಿ ಅ.16ರ ಬುಧವಾರ ನಡೆದಿದೆ. ಪುತ್ತೂರಿನ ಬೈಪಾಸ್ ರಸ್ತೆಯಲ್ಲಿ ಬಜರಂಗದಳದ ಕಾರ್ಯಕರ್ತರು ಆಟೋ ರಿಕ್ಷಾವನ್ನು ತಡೆದು ಗೋವಿನ ರಕ್ಷಣೆ ಮಾಡಿದ್ದಾರೆ.
ಗೋವನ್ನು ಅಕ್ರಮವಾಗಿ ಪುತ್ತೂರು ಬೈಪಾಸ್ ರಸ್ತೆಯ ಮೂಲಕ ವ್ಯಕ್ತಿಯೋರ್ವ ಆಟೋ ರಿಕ್ಷಾದಲ್ಲಿ ಮಹಿಳೆಯರ ಕಾಲಡಿಯಲ್ಲಿ ಇಟ್ಟು ಸಾಗಿಸುತ್ತಿರುವುದರ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.
ಹಿಂಸಾತ್ಮಕ ರೀತಿಯಲ್ಲಿ ಜಾನುವಾರನ್ನು ಮಹಿಳೆಯರ ಕಾಲಡಿಯಲ್ಲಿ ಇಟ್ಟು ಸಾಗಿಸಲಾಗುತ್ತಿತ್ತು. ಅಲ್ಲದೆ ರಿಕ್ಷಾದ ಸೀಟಿನ ಎಡೆಯಲ್ಲಿ ಸಿಲುಕಿಕೊಂಡ ಜಾನುವಾರಿನ ಒಂದು ಕಾಲು ಕೂಡಾ ತುಂಡಾಗಿದ್ದು, ಸಂಘಟನೆ ಕಾರ್ಯಕರ್ತರು ಅತ್ಯಂತ ಜಾಗೃತೆ ವಹಿಸಿ ಅದನ್ನು ರಿಕ್ಷಾದಿಂದ ಹೊರಕ್ಕೆ ಎಳೆದು ತೆಗೆದಿದ್ದಾರೆ. ಆ ಬಳಿಕ ಜಾನುವಾರು ಸಹಿತ ಆಟೋ ರಿಕ್ಷಾ ಹಾಗೂ ಮಹೆಳೆಯರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
.jpeg)