-->
PUTTUR: ನಾಳೆ ಕೆಲಿಂಜದಲ್ಲಿ ದಾರಿಮೀಸ್ ಅಸೋಸಿಯೇಷನ್ 23ನೇ ವಾರ್ಷಿಕೋತ್ಸವ, ಅನುಸ್ಮರಣೆ, ಅಧ್ಯಯನ ಶಿಬಿರ

PUTTUR: ನಾಳೆ ಕೆಲಿಂಜದಲ್ಲಿ ದಾರಿಮೀಸ್ ಅಸೋಸಿಯೇಷನ್ 23ನೇ ವಾರ್ಷಿಕೋತ್ಸವ, ಅನುಸ್ಮರಣೆ, ಅಧ್ಯಯನ ಶಿಬಿರ


ಪುತ್ತೂರು: ದ.ಕ.ಜಿಲ್ಲಾ ದಾರಿಮೀಸ್ ಅಸೋಸಿಯೇಷನ್ ಇದರ 23ನೇ ವಾರ್ಷಿಕೋತ್ಸವ, ವಿದ್ವಾಂಸ ಶೈಖುನಾ ಶಂಸುಲ್ ಉಲಮಾ ಅನುಸ್ಮರಣೆ ಹಾಗೂ ಧಾರ್ಮಿಕ ಆಧ್ಯಯನ ಶಿಬಿರವು ಅ.29ರಂದು ವಿಟ್ಲದ ಕೆಲಿಂಜ ಜುಮ್ಮಾ ಮಸೀದಿಯ ವಠಾರದಲ್ಲಿ ನಡೆಯಲಿದೆ ಎಂದು ಜಿಲ್ಲಾ ದಾರಿಮೀಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕರೀಂ ದಾರಿಮಿ ಕುಂಬ್ರ ತಿಳಿಸಿದ್ದಾರೆ.

ಅವರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅ.29ರಂದು ಬೆಳಗ್ಗೆ ಸ್ಥಳೀಯ ಜಮಾಅತ್ ಅಧ್ಯಕ್ಷ ಅಬ್ದುಲ್ ಕರೀಂ ಕಂಪದಬೈಲು ಧ್ವಜಾರೋಹಣ ನೆರವೇರಿಸಲಿದ್ದಾರೆ. ಬಳಿಕ ಧಾರ್ಮಿಕ ಅಧ್ಯಯನ ಶಿಬಿರ ನಡೆಯಲಿದ್ದು, ದ.ಕ.ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ. ಎಸ್‍ಕೆಎಸ್‍ಎಸ್‍ಎಫ್ ಕರ್ನಾಟಕ ರಾಜ್ಯ ಕೋಶಾಧಿಕಾರಿ ಸಯ್ಯದ್ ಅಮೀರ್ ತಂಙಳ್ ಕಿನ್ಯ ಪ್ರಾರ್ಥನೆ ನೆರವೇರಿಸಲಿದ್ದಾರೆ. ದ.ಕ.ಜಿಲ್ಲಾ ದಾರಿಮೀಸ್ ಅಸೋಸಿಯೇಷನ್ ಕೆ.ಬಿ. ಅಬ್ದುಲ್ ಖಾದರ್ ದಾರಿಮಿ ಕೊಡುಂಗಾಯಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಸ್ತ ಕೇಂದ್ರ ಸಮಿತಿ ಮುಶಾವರ ಸದಸ್ಯರಾದ ಶೈಖುನಾ ಬಿ.ಕೆ. ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಅನುಗ್ರಹ ಭಾಷಣ ಹಾಗೂ ಶೈಖುನಾ ಉಸ್ಮಾನುಲ್ ಫೈಝಿ ತೋಡಾರ್ ಅನುಗ್ರಹ ಭಾಷಣ ಮಾಡಲಿದ್ದಾರೆ. ಕೇರಳದ ಅಲವಿ ದಾರಿಮಿ ಕುಝಿಕುನ್ನ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಶಂಸುಲ್  ಸ್ವಾಗತ ಸಮಿತಿ ಅಧ್ಯಕ್ಷ ಹನೀಫ್ ದಾರಿಮಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. 

ಮದ್ಯಾಹ್ನ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ದ.ಕ. ಜಿಲ್ಲಾ ಅಧ್ಯಕ್ಷ ಎನ್.ಪಿ.ಎಂ ಝೈನುಲ್ ಅಬಿದೀನ್ ತಂಙಳ್ ದುಗ್ಗಲಡ್ಕ ಅವರ ನೇತೃತ್ವದಲ್ಲಿ ಶಂಸುಲ್ ಉಲಮಾ ಮೌಲಿದ್ ಹಾಗೂ ಅನುಸ್ಮರಣಾ ಕಾರ್ಯಕ್ರಮ ನಡೆಯಲಿದೆ. ದ.ಕ. ಜಿಲ್ಲೆಯಲ್ಲಿ 300 ದಾರಿಮಿ ಪದವಿದಾರರಿದ್ದಾರೆ. ಈ ದಾರಿಮಿ ಉಲಮಾ ಪದವೀದರರ ಸಂಘಟನೆಯಾದ ದಾರಿಮೀಸ್ ಎಸೋಸಿಯೇಷನ್ ಸಮಿತಿಯ ಕಳೆದ 23 ವರ್ಷಗಳಿಂದ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಇದೀಗ 23ನೇ ವಾಷಿಕೋತ್ಸವ ಆಚರಿಸುತ್ತಿದೆ ಎಂದು ತಿಳಿಸಿದರು. 

ಸುದ್ದಿಗೋಷ್ಠಿಯಲ್ಲಿ ಶಂಸುಲ್ ಉಲಮಾ ಆಂಡ್ ನೇರ್ಚೆ ಸ್ವಾಗತ  ಸಮಿತಿ ಅಧ್ಯಕ್ಷ ಮಹಮ್ಮದ್ ಅಲಿ ದಾರಿಮಿ ಕುಕ್ಕಾಜೆ ಮತ್ತು ದ.ಕ. ಜಂಇಯ್ಯತ್ತುಲ್ ಖುತಬಾ ಅಧ್ಯಕ್ಷ ಅಬ್ಬಾಸ್ ದಾರಿಮಿ ಕೆಲಿಂಜ ಉಪಸ್ಥಿತರಿದ್ದರು. 


Ads on article

Advertise in articles 1

advertising articles 2

Advertise under the article