
PUTTUR: ಅದ್ದುಗೆ ಕಾಂಗ್ರೆಸ್ ಗುದ್ದು!!
ಪುತ್ತೂರು: ವ್ಯಕ್ತಿಯೊಬ್ಬ `ಪವಿತ್ರ ಧಾರ್ಮಿಕ ಕೇಂದ್ರವೊಂದರ ಒಳಗಡೆ ಇದ್ದುಕೊಂಡು ಮಹಿಳೆಯೊಬ್ಬಳೊಂದಿಗೆ ಮಾಡಿರುವ ನಗ್ನ ಲೈವ್ ಸೆಕ್ಸ್ ಚಾಟ್' ವಿಡಿಯೋ ತುಣುಕೊಂದು ಶನಿವಾರ ಸೋಶಿಯಲ್ ಮೀಡಿಯಾಗಳಲ್ಲಿ ಬಾರೀ ವೈರಲ್ ಆಗಿತ್ತು. ಆತ ಶಾಸಕರ ಆಪ್ತನೂ ಅಲ್ಲ, ಕಾಂಗ್ರೆಸ್ ಪಕ್ಷದ ಪದಾಧಿಕಾರಿಯೂ ಅಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ತಿಳಿಸಿದ್ದಾರೆ.
ಪುತ್ತೂರಿನ ಮಸೀದಿಯೊಂದರ ಒಳಗಡೆ ಮಹಿಳೆಯೊಬ್ಬರಿಗೆ ವಿಡಿಯೋ ಕಾಲ್ ಮಾಡಿ, ಆಕೆಯೊಂದಿಗೆ ಲೈವ್ ಸೆಕ್ಸ್ ಚಾಟ್ ನಡೆಸಿ ಮೋಜು ಅನುಭವಿಸಿರುವ ದ್ಯಶ್ಯಾವಳಿಯ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಬಾರೀ ವೈರಲ್ ಆಗಿದ್ದು, ರಾಜಕೀಯ ಪಕ್ಷಗಳ ಸೋಷಿಯಲ್ ಮೀಡಿಯಾಗಳ ಸಹಿತ ಎಲ್ಲಾ ಸೋಷಿಯಲ್ ಮೀಡಿಯಾ ಗ್ರೂಪ್‍ಗಳಲ್ಲಿ ಹರಿದಾಡಿತ್ತು.
ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಶಾಸಕರ ವಲಯದಲ್ಲಿ ಗುರುತಿಸಿಕೊಂಡಿರುವ ಆಪ್ತ ವ್ಯಕ್ತಿಯಲ್ಲ. ಯಾರೋ ತಾನು ಆಪ್ತ ಎಂದು ಹೇಳಿಕೊಂಡು ಹೋದರೆ ಆತನನ್ನು ಶಾಸಕರ ಆಪ್ತನೆಂದು ಪರಿಗಣಿಸಲಾಗದು. ಆತ ಕಾಂಗ್ರೆಸ್ ಪಕ್ಷದ ಮುಖಂಡನೂ ಅಲ್ಲ ಎಂದು ಕಾಂಗ್ರೆಸ್ ನಾಯಕರು ತಿಳಿಸಿದ್ದಾರೆ. ಈ ಕುರಿತು ಶಾಸಕರು ` ಆತ ಶಾಸಕರ ಆಪ್ತನೆಂಬುವುದು' ತಪ್ಪು ಮಾಹಿತಿ ಎಂದಿದ್ದಾರೆ.