.jpg)
Mangaluru: ಹಣ ನೀಡುವುದಾಗಿ ಹೇಳಿ ಹೆಣ್ಮಕ್ಕಳ ಕರೆಯುತ್ತಿದ್ದವನ ಬಟ್ಟೆ ಬಿಚ್ಚಿಸಿದ ಯುವತಿ!
Wednesday, September 25, 2024
ಮಂಗಳೂರು: ಹಾಡುಹಗಲೇ
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ
ಯುವತಿಯರನ್ನು ಹಣ ನೀಡುವುದಾಗಿ ಹೇಳಿ
ಕರೆಯುತ್ತಿದ್ದ ಯುವಕನೊಬ್ಬನನ್ನು ಯುವತಿಯರು ಸೇರಿ ಚೆನ್ನಾಗಿ ವಿಚಾರಿಸಿ, ಪೊಲೀಸರಿಗೆ ಒಪ್ಪಿಸಿದ
ಘಟನೆ ಮಂಗಳೂರು ನಗರದ ನವಭಾರತ್ ಸರ್ಕಲ್ ಬಳಿ ನಡೆದಿದೆ.
ಯುವಕನನ್ನು ಶಬರಿ
ಎಂದು ಗುರುತಿಸಲಾಗಿದ್ದು, ಈತ ಮಂಗಳವಾರ ಪಿವಿಎಸ್ ಬಳಿ ರಸ್ತೆ ಸಮೀಪ ನಿಂತುಕೊಂಡ ನಡೆದುಕೊಂಡು ಹೋಗುತ್ತಿದ್ದ
ಯುವತಿಯರನ್ನು ಹಣ ನೀಡುವುದಾಗಿ ಹೇಳಿ ಅಸಭ್ಯವಾಗಿ ಕರೆಯುತ್ತಿದ್ದನು ಎನ್ನಲಾಗಿದೆ. ಈ ವೇಳೆ ಅದೇ ದಾರಿಯಾಗಿ
ಬಂದಿದ್ದ ಯುವತಿಯೊಬ್ಬಳು ಈತನ ಬೆಂಡೆತ್ತಿದ್ದಾಳೆ. ಈ ವೇಳೆ ಯಾಮಾರಿಸಲು ಯತ್ನಿಸಿದ ಆರೋಪಿಯನ್ನು ಬಟ್ಟೆ
ಬಿಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾಳೆ. ಈ ಕುರಿತು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.