
Byndoor: ಈಜಲು ತೆರಳಿದ್ದ ಹೈಸ್ಕೂಲ್ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಸಾವು; ಯಡ್ತರೆಯಲ್ಲಿ ಮಡುಗಟ್ಟಿದ ಶೋಕ!
ಉಡುಪಿ: ಕಾಣೆಯಾಗಿದ್ದ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿರುವ ಘಟನೆ ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ನಡೆದಿದೆ. ನಾಗೇಂದ್ರ (13), ಮೊಹಮ್ಮದ್ ಶಫಾನ್ (13) ಮೃತ ವಿದ್ಯಾರ್ಥಿಗಳಾಗಿದ್ದು, ಮೃತ ಸ್ನೇಹಿತರಿಬ್ಬರೂ ಬೈಂದೂರಿನ ಯಡ್ತರೆ ಗ್ರಾಮದವರಾಗಿದ್ದಾರೆ. ಬೈಂದೂರಿನ ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.
ನಿನ್ನೆ
ಪರೀಕ್ಷೆ ಬರೆದು ಬಂದಿದ್ದ ಸ್ನೇಹಿತರು ಮಧ್ಯಾಹ್ನದ ಊಟ ಮುಗಿಸಿ ಬಂದು ನಾಪತ್ತೆಯಾಗಿದ್ದರು.
ಬಳಿಕ ಪೋಷಕರು ಬೈಂದೂರು ಠಾಣೆಗೆ ದೂರು ದಾಖಲಿಸಿದ್ದರು. ಈ ಮಧ್ಯೆ ಮಧ್ಯರಾತ್ರಿ ವೇಳೆ ಬೈಂದೂರಿನ ಸೇನೇಶ್ವರ
ದೇಗುಲ ಹಿಂಬದಿಯ ಕೆರೆ ಸಮೀಪ ಅವರ
ಸೈಕಲ್, ಚಪ್ಪಲಿ ಹಾಗೂ ಧರಿಸಿದ್ದ ಬಟ್ಟೆಗಳು ಪತ್ತೆಯಾಗಿದ್ದವು. ಹುಡುಕಾಟ ನಡೆಸಿದ ವೇಳೆ ಶಫಾನ್
ಹಾಗೂ ನಾಗೇಂದ್ರ ಮೃತದೇಹ ಪತ್ತೆಯಾಗಿದೆ. ಇವರಿಬ್ಬರಿಗೂ ಈಜು ಬರುತ್ತಿಲ್ಲವಾಗಿದ್ದು, ಮಳೆಯೂ ಸುರಿಯುತ್ತಿದ್ದರಿಂದ
ಆ ಕಡೆ ಯಾರೂ ಹೋಗಿರಲಿಲ್ಲ. ಇದರಿಂದಾಗಿ ಈ ಸ್ನೇಹಿತರಿಬ್ಬರು ನೀರಿನಲ್ಲಿ ಈಜಲು ಹೋಗಿ ಮೃತಪಟ್ಟಿರುವ
ಸಾಧ್ಯತೆ ಇದೆ. ಈ ಕುರಿತು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಡ್ತರೆ ಗ್ರಾಮದಲ್ಲಿ ಶೋಕ
ಮಡುಗಟ್ಟಿದ್ದು, ಎರಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.