-->
PUTTUR: ಸಿಎಂ ಸಿದ್ದರಾಮಯ್ಯ ಅವರೇ ರಾಜೀನಾಮೆ ನೀಡಿ; ಪ್ರತಾಪ್ ಸಿಂಹ

PUTTUR: ಸಿಎಂ ಸಿದ್ದರಾಮಯ್ಯ ಅವರೇ ರಾಜೀನಾಮೆ ನೀಡಿ; ಪ್ರತಾಪ್ ಸಿಂಹ

ಪುತ್ತೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನ ಹೈಕೋರ್ಟ್ ವಜಾಗೊಳಿಸಿದೆ. ಈ ವಿಚಾರಕ್ಕೆ ಸಂಬಂಧಿಸಿ ಪುತ್ತೂರಿನಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ತಕ್ಷಣಕ್ಕೆ ಸಿದ್ದಾರಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಒಳ್ಳೆಯ ಮೇಲ್ಪಂಕ್ತಿ ಹಾಕಬೇಕು. ನೀವು ನಿಮ್ಮ ಪತ್ನಿ ಹೆಸರಲ್ಲಿ ಮಾಡಿದ 14 ಸೈಟ್ ಸರ್ಕಾರಕ್ಕೆ ಹಸ್ತಾಂತರ ಮಾಡಿ ಎಂದು ಈ ಹಿಂದೆಯೇ ಗಿಣಿ ಹೇಳಿದಂತೆ ಹೇಳಿದ್ದೆ. ಆದ್ರೆ ಅವರು ನನ್ನ ಸಲಹೆಯನ್ನ ಕೇಳಿಲ್ಲ. ಬದಲಾಗಿ ಅವರು ತಿಳಿಗೇಡಿಗಳ ಸಲಹೆಯನ್ನು ನೆಚ್ಚಿಕೊಂಡರು. ಹಾಗಾಗಿ ಅವರಿಗೆ ಇಂದು ಈ ಪರಿಸ್ಥಿತಿ ಬಂದಿದೆ. ಆವತ್ತೆ ಆ ಸೈಟ್ ಗಳನ್ನ ಹಸ್ತಾಂತರ ಮಾಡಿದ್ದರೆ, ಎಲ್ಲಾ ಪಕ್ಷದ ಎಲ್ಲಾ ಕಳ್ಳರು ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಜೊತೆಗೆ ಸೈಟ್ ಗಳನ್ನ ಹಸ್ತಾಂತರ ಮಾಡಿದ್ದರೆ ಸಿಎಂ ಪಟ್ಟವೂ ಉಳಿಯುತ್ತಿತ್ತು. ಕಳಂಕ ಮುಕ್ತರಾಗುತ್ತಿದ್ದರು. ಆದ್ರೆ ಸಿದ್ರಾಮಯ್ಯ ಅವರು ನನ್ನ ಕಿವಿ ಮಾತು ಕೇಳಲಿಲ್ಲ. ಈಗ ಮುಖ್ಯಮಂತ್ರಿ ಸ್ಥಾನವನ್ನೇ ಬಿಟ್ಟು ಕೊಡಬೇಕಾದ ಪರಿಸ್ಥಿತಿ ಬಂದಿದೆ. ಇದು ಅವರ ಸ್ವಯಂಕೃತ ಅಪರಾಧ. ಇನ್ನು ವಿಳಂಬ ಮಾಡಬೇಡಿ ತಕ್ಷಣಕ್ಕೆ ರಾಜೀನಾಮೆ ಕೊಡಿ ಎಂದು ಹೇಳಿದರು. 


ಇನ್ನು ನೀವು ಪಟ್ಟಕ್ಕೆ ಅಂಟಿಕೊಂಡು ಹೇಮಂತ್ ಸೊರೇನ್, ಅರವಿಂದ ಕೇಜ್ರಿವಾಲ್ ಹಾದಿಯನ್ನು ಹಿಡಿಯಬಹುದು. ಆದರೆ ಅವರು ನಿನ್ನೆ ಮೊನ್ನೆ ಬಂದ ರಾಜಕಾರಣಿಗಳು. ಅವ್ರಲ್ಲಿ ಯಾವುದೇ ಮೌಲ್ಯಯುತ ರಾಜಕಾರಣವಿಲ್ಲ. ಆದ್ರೆ ನಿಮ್ಮನ್ನು ನಾವು ಸೈದ್ಧಾಂತಿಕವಾಗಿ ವಿರೋಧಿಸುತ್ತೇವೆ. ನಿಮ್ಮ ಬಡವರ ಪರ ಕಾಳಜಿಯನ್ನ ಮೆಚ್ಚಿಕೊಂಡಿದ್ದೇವೆ. ನೀವು ಕಳಪೆ ರಾಜಕಾರಣಿಗಳನ್ನ ಅನುಸರಸಬೇಡಿ. ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಿ ಎಂದವರು ಹೇಳಿದ್ರು. 

ನಿಮ್ಮ ಮೇಲಿರುವ ಹಗರಣದ ತನಿಖೆ ಆಗಲಿ. ತನಿಖೆ ಮುಗಿದ ಬಳಿಕ ಮತ್ತೆ ಮುಖ್ಯಮಂತ್ರಿ ಆಗುವ ಅವಕಾಶವೂ ಇದೆ. ಹಾಗೇ ಮಾಡದೇ ಹೋದಲ್ಲಿ ನಿಮ್ಮ 45 ವರ್ಷದ ರಾಜಕಾರಣ ಕಳಂಕಯುತ ಅಂತ್ಯಕ್ಕೆ ನಾಂದಿ ಹಾಡಲಿದೆ. ರಾಜರಾಕಣದಲ್ಲಿ ಶತ್ರುಗಳು ಯಾವತ್ತೂ ಅಕ್ಕಪಕ್ಕದಲ್ಲಿರುತ್ತಾರೆ. ಸಂಸದನಾಗಿ ನನಗೂ ಅದರ ಅನುಭವ ಇದೆ. ನಿಮ್ಮ ಶತ್ರುಗಳು ನಿಮ್ಮ ಅಕ್ಕಪಕ್ಕದಲ್ಲೇ ಇದ್ದಾರೆ. ಬಿಜೆಪಿ-ಜೆಡಿಎಸ್ ನಲ್ಲಿ ಶತ್ರುತ್ವ ಇರಲ್ಲ. ಆದ್ರೆ ಕಾಂಗ್ರೆಸ್ ನಲ್ಲಿದ್ದಾರೆ. ನಿಮ್ಮ ಜೊತೆ ನಾವಿದ್ದೇವೆ ಅನ್ನುವವರನ್ನ ನಂಬಬೇಡಿ. ಅವರೆಲ್ಲರಿಗಿಂತಲೂ ನೀವು ಉತ್ತಮ ರಾಜಕೀಯ ನಡೆಸಿದವರು. ಹಾಗಾಗಿ ದಯವಿಟ್ಟು ರಾಜೀನಾಮೆ ಕೊಡಿ ಎಂದು ಪುನರುಚ್ಛಿಸಿದರು. 

Ads on article

Advertise in articles 1

advertising articles 2

Advertise under the article