PUTTUR: ಶಾಸಕ ಅಶೋಕ್ ಕುಮಾರ್ ರೈ ಮನೆ ಪಕ್ಕದಲ್ಲೇ ಭೂಕುಸಿತ!!
Saturday, August 3, 2024
ಪುತ್ತೂರು: ಪುತ್ತೂರು-ಉಪ್ಪಿನಂಗಡಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಕೋಡಿಂಬಾಳದಲ್ಲಿ ಭಾರೀ ಭೂಕುಸಿತ ಉಂಟಾಗಿ ರಸ್ತೆ ಬಂದ್ ಆಗಿದೆ. ಶಾಸಕ ಅಶೋಕ್ ಕುಮಾರ್ ರೈ ಅವರ ಮನೆಯ ಬಳಿಯಲ್ಲಿ ಈ ಭೂಕುಸಿತ ಉಂಟಾಗಿದ್ದು, ರಸ್ತೆಗೆ ಮಣ್ಣು ಬಿದ್ದಿದೆ. ಚತುಷ್ಪಥ ರಸ್ತೆಯಾಗಿರುವ ಕಾರಣ ಇನ್ನೊಂದು ಭಾಗದ ರಸ್ತೆಯಲ್ಲಿ ವಾಹನಗಳನ್ನ ಬಿಡಲಾಗುತ್ತಿದೆ. ಸದ್ಯ ಜೆಸಿಬಿ ಮುಖಾಂತರ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ.