-->
Good News: ರೈಲು ಹಳಿ ದುರಸ್ತಿ ಪೂರ್ಣ; ಮಂಗಳೂರು-ಬೆಂಗಳೂರು ರೈಲು ಓಡಾಟ ಶೀಘ್ರ ಆರಂಭ!

Good News: ರೈಲು ಹಳಿ ದುರಸ್ತಿ ಪೂರ್ಣ; ಮಂಗಳೂರು-ಬೆಂಗಳೂರು ರೈಲು ಓಡಾಟ ಶೀಘ್ರ ಆರಂಭ!


ಮಂಗಳೂರು: ಮಂಗಳೂರು-ಬೆಂಗಳೂರು ರೈಲು ಮಾರ್ಗದ ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ನಡೆದ ಭೀಕರ ಭೂಕುಸಿತದಿಂದ ಕಳೆದ ಒಂದು ವಾರದಿಂದ 12 ರೈಲುಗಳ ಓಡಾಟ ರದ್ದುಗೊಂಡಿತ್ತು. ಈ ರೈಲು ರದ್ದು ಆದೇಶವನ್ನು ನೈಋತ್ಯ ರೈಲ್ವೆ ವಲಯವು ಆಗಸ್ಟ್‌ 6 ರವರೆಗೆ ಮತ್ತೆ ಮುಂದೂಡಿದೆ. ಈ ಹಿಂದೆ ಆಗಸ್ಟ್‌ 4ರವರೆಗೆ ರೈಲು ರದ್ದುಗೊಂಡಿತ್ತು. ಇದೀಗ ಮತ್ತೆ 12 ರೈಲುಗಳ ಓಡಾಟ ರದ್ದು ವಿಸ್ತರಿಸಲಾಗಿದೆ. ಅದರಂತೆ ಬೆಂಗಳೂರು-ಕಣ್ಣೂರು, ಕಣ್ಣೂರು-ಬೆಂಗಳೂರು, ಬೆಂಗಳೂರು-ಕಾರವಾರ, ಕಾರವಾರ-ಬೆಂಗಳೂರು, ಬೆಂಗಳೂರು-ಮುರ್ಡೇಶ್ವರ, ಮುರ್ಡೇಶ್ವರ-ಬೆಂಗಳೂರು, ವಿಜಯಪುರ-ಮಂಗಳೂರು ಸೆಂಟ್ರಲ್‌, ಮಂಗಳೂರು ಸೆಂಟ್ರಲ್-ವಿಜಯಪರ, ಯಶವಂತಪುರ-ಕಣ್ಣೂರು, ಕಾರವಾರ-ಯಶವಂತಪುರ, ಯಶವಂತಪುರ-ಮಂಗಳೂರು ಜಂಕ್ಷನ್‌ ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ ರೈಲು ನಿಲ್ದಾಣ ಹೀಗೆ ಒಟ್ಟು 12 ರೈಲುಗಳನ್ನು ರದ್ದು ಪಡಿಸಲಾಗಿದೆ. ಆದರೆ, ಇದೀಗ ಈ ರೈಲುಗಳು ಆಗಸ್ಟ್‌ 7ರಿಂದ ಓಡಾಟ ನಿರೀಕ್ಷೆ ಹೊಂದಲಾಗಿದೆ.

ಸುಮಾರು 400 ಮಂದಿ ತಂಡವಾಗಿ ಯಡಕುಮೇರಿ ಹಾಗೂ ಕಡಗರವಳ್ಳಿ ಮಧ್ಯೆ ನಡೆದ ಭೂಕುಸಿತವನ್ನು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಸರಿಪಡಿಸಿದ್ದಾರೆ. ಭಾರೀ ಕಾರ್ಯಾಚರಣೆ ಮೂಲಕ ಕೇವಲ ಹತ್ತು ದಿನಗಳಲ್ಲಿ ರೈಲು ಹಳಿಯನ್ನು ಸರಿಪಡಿಸಿದ್ದಾರೆ. ಸದ್ಯ ಸರಿಪಡಿಸಲಾದ ರೈಲು ಮಾರ್ಗದಲ್ಲಿ ರೈಲು ಪರೀಕ್ಷೆಯನ್ನು ನಡೆಸಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಶೀಘ್ರದಲ್ಲೇ ಈ ಮಾರ್ಗದಲ್ಲಿ ಓಡಾಟ ನಡೆಸುತ್ತಿದ್ದ 12 ರೈಲುಗಳ ಓಡಾಟ ಮರು ಆರಂಭಗೊಳಿಸಲಿದೆ. ಆಗಸ್ಟ್‌ 6ಕ್ಕೆ ಬಹುತೇಕ ರೈಲು ರದ್ದು ಆದೇಶ ಕೊನೆಯಾಗುವ ನಿರೀಕ್ಷೆ ಇದೆ.




ಹೀಗಾಗಿ ಇನ್ನೆರಡು ದಿನಕ್ಕೆ ಸ್ಪಷ್ಟ ಆದೇಶ ಹೊರ ಬರಲಿದ್ದು, ಆಗಸ್ಟ್‌ 7ರ ನಂತರ ರೈಲು ಓಡಾಟ ಮರು ಆರಂಭವಾಗುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟೇ ಅಲ್ಲದೇ, ಆಗಸ್ಟ್‌ 7ರಿಂದ ರೈಲು ಟಿಕೆಟ್‌ ಬುಕ್ಕಿಂಗ್‌ ಮಾಡಿದವರು ಟಿಕೆಟ್‌ ಅನ್ನು ಕಾಯ್ದಿರಿಸಲಾಗಿದೆ. ಈ ರೈಲು ಮಾರ್ಗ ದುರಸ್ತಿಗೆ ಹಗಲು, ರಾತ್ರಿ ಎನ್ನದೇ ರೈಲ್ವೆ ವಲಯದ ಸಿಬ್ಬಂದಿಗಳು ಕಾರ್ಯನಿರತರಾಗಿದ್ದರು. ಹಗಲು-ರಾತ್ರಿ 200 ಮಂದಿ ಹಾಗೂ 120 ಮಂದಿ ರಾತ್ರಿ ಪಾಳಿಯಲ್ಲಿ ಇದಕ್ಕಾಗಿ ಶ್ರಮಿಸಿದ್ದರು. ಜೊತೆಗೆ 110 ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ಅಗತ್ಯ ಸಹಕಾರ ನೀಡಿದ್ದರು. ಸ್ಥಳದಲ್ಲೇ ಟೆಂಟ್‌, ರೈನ್‌ಕೋಟ್‌, ಸೇಫ್ಟಿ ಶೂ, ಪೋರ್ಟೇಬಲ್‌ ಟಾಯ್ಲೆಟ್ಸ್‌ ಹಾಗೂ ಅಗತ್ಯ ಸಾಮಗ್ರಿಗಳನ್ನು ಪೂರೈಸಲಾಗಿತ್ತು.


 

ಜೊತೆಗೆ ವೈದ್ಯರು, ನರ್ಸಿಂಗ್‌ ಸಿಬ್ಬಂದಿ ಹಾಗೂ ಅಗತ್ಯ ಮೆಡಿಕಲ್‌ ಸಾಮಗ್ರಿಗಳನ್ನು ನೀಡಲಾಗಿದೆ. ಇನ್ನು ಕಾರ್ಯಾಚರಣೆಗೆ ಬೇಕಾದ 6 ಹಿಟಾಚಿ, 5 ಪೋಕ್ಲೈನ್‌ ಮೆಷಿನ್‌, 3870 ಕಲ್ಲುಗಳು, 1 ಲಕ್ಷ ಮರಳು ಚೀಲಗಳು, ಪ್ರತಿದಿನ 200 ಲೀಟರ್‌ನಷ್ಟು ಡೀಸೆಲ್‌, 8 ಪೋರ್ಟೇಬಲ್‌ ಜನರೇಟರ್‌, 60 ಫ್ಲಡ್‌ ಲೈಟ್ಸ್‌, 8 ಟಾರ್ಚ್‌ಗಳು, 10 ಎಕ್ಸ್‌ಟೆನ್ಶನ್‌ ಬೋರ್ಡ್‌, 140 ಲೀಟರ್‌ ಪೆಟ್ರೋಲ್‌, ಗ್ಯಾಸ್‌ ಕಟ್ಟರ್‌ಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಇನ್ನು ಯಡಕುಮೇರಿ, ದೋಣಿಗಲ್‌, ಕಡಗರವಳ್ಳಿ ಈ ಎಲ್ಲ ಪ್ರದೇಶಗಳು ಸಂಪೂರ್ಣ ಮೊಬೈಲ್‌ ನೆಟ್‌ವರ್ಕ್‌ ರಹಿತ ಸ್ಥಳವಾಗಿದೆ. ಆದ್ದರಿಂದ ಸಂವಹನಕ್ಕಾಗಿ ಆಟೋ ಫೋನ್‌, ಕಂಟ್ರೋಲ್‌ ಫೋನ್‌, ಸ್ಯಾಟಲೈಟ್‌ ಫೋನ್‌, ವೈಫೈ ಹಾಗೂ ವಿಎಸ್‌ಎಟಿ ಕಮ್ಯುನಿಕೇಶನ್‌ ಬಳಸಿಕೊಂಡು ಹುಬ್ಬಳ್ಳಿಯಲ್ಲಿರುವ ವಾರ್‌ ರೂಂ ಜೊತೆಗೆ ನಿರಂತರ ಸಂಪರ್ಕ ಸಾಧಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು.

Ads on article

Advertise in articles 1

advertising articles 2

Advertise under the article