PUTTUR: ಕೆಲವೇ ಕ್ಷಣಗಳಲ್ಲಿ ವಾಹನ ಸಂಚಾರಕ್ಕೆ ಮುಕ್ತ!!
Friday, August 2, 2024
ಪುತ್ತೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಬಪ್ಪಳಿಗೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರ ಬಂದ್ ಆಗಿದ್ದು, ಸದ್ಯ ಮಣ್ಣಿನ ತೆರವು ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ, ಕೆಲವೇ ಹೊತ್ತಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಇದೀಗ ಎಸಿ ಜುಬಿನ್ ಮೊಹಪಾತ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇನ್ನು ಗುಡ್ಡ ಕುಸಿತದ ಬಳಿಕ ಅತ್ತ ಯಾರೂ ತೆರಳದಂತೆ ಸ್ಥಳೀಯ ನಾಯಕರು ಮುನ್ನಚ್ಚೆರಿಕಾ ಕ್ರಮ ಕೈಗೊಂಡರು. ಬಪ್ಪಳಿಗೆಯ ಸಾಮಾಜಿಕ ಕಾರ್ಯಕರ್ತ ರಝಾಕ್ ಬಿ.ಎಚ್., ನಗರಸಭಾ ನಾಮ ನಿರ್ದೇಶಿತ ಸದಸ್ಯ ಶರೀಫ್ ಬಲ್ನಾಡ್ ಘಟನಾ ಸ್ಥಳದಲ್ಲೇ ಮೊಕ್ಕಾಂ ಹೂಡಿ ವಾಹನ ಸವಾರರನ್ನ ಬದಲಿ ಮಾರ್ಗದಲ್ಲಿ ಚಲಿಸುವಂತೆ ಮಾರ್ಗಸೂಚಿ ನೀಡಿದ್ರು.
.jpeg)
