BANTWALA: ಮಾಣಿಯಿಂದ ಮಿತ್ತೂರುವರೆಗೆ ಸರತಿ ಸಾಲಿನಲ್ಲಿ ನಿಂತ ವಾಹನಗಳು!!
Thursday, August 1, 2024
ಪುತ್ತೂರು: ಮಾಣಿ ಸಮೀಪದ ನೇರಳಕಟ್ಟೆಯಲ್ಲಿ ರಸ್ತೆ ಬ್ಲಾಕ್ ಆಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ಮದುವೆ ಕಾರ್ಯಕ್ರಮವಿತ್ತು. ಈ ವೇಳೆ ಹಲವಾರು ವಾಹನಗಳು ಹೋಗಿ ಬರುತ್ತಿದ್ದವು. ಹಾಗಾಗಿ ಪುತ್ತೂರು ಮಂಗಳೂರು ರಸ್ತೆಯ ನೇರಳಕಟ್ಟೆಯಲ್ಲಿ ಬ್ಲಾಕ್ ಆಗಿದೆ.
ಮಾಣಿಯಿಂದ ಮಿತ್ತೂರು ತನಕ ವಾಹನಗಳು ಬ್ಲಾಕ್ ಆಗಿದ್ದವು. ಭಾರೀ ಮಳೆಯ ನಡುವೆ ಮದುವೆ ಸಮಾರಂಭದಿಂದಾಗಿ ರಸ್ತೆ ಕೂಡ ಬ್ಲಾಕ್ ಆದ ಪರಿಣಾಮ ಪಾರ್ಕಿಂಗ್ ವಿಚಾರ ಸಮರ್ಪಕವಾಗಿ ನಿರ್ವಹಿಸದ್ದಕ್ಕೆ ವಾಹನ ಸವಾರರು ಜನಪ್ರಿಯ ಗಾರ್ಡನ್ ನ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

.jpeg)
