BANTWALA: ಪುಣಚದಲ್ಲಿ ಧರೆ ಕುಸಿದ ಅಬ್ಬರಕ್ಕೆ ಅಡಿಕೆ ತೋಟ ನಾಶ!!
ಬಂಟ್ವಾಳ: ಗುಡ್ಡದ ಮೆಲಿಂದ ಕೃಷಿ ತೋಟ ಕುಸಿದು ಮನೆಯಂಗಳಕ್ಕೆ ಬಿದ್ದ ಘಟನೆ ಬಂಟ್ವಾಳದ ಪುಣಚ ಬಾಲಕುಮೇರಿಯಲ್ಲಿ ನಡೆದಿದೆ. ತೀರ್ಥರಾಮ್ ಗೌಡ ಎಂಬವರ ತೋಟ ಮನೆಯಿಂದ ಮೇಲ್ಭಾಗದ ಗುಡ್ಡದಲ್ಲಿದ್ದು, ಭಾರೀ ಮಳೆಯಿಂದಾಗಿ ಆ ತೋಟವಿರುವ ಧರೆಯೇ ಮನೆಯಂಗಳಕ್ಕೆ ಬಿದ್ದಿದೆ. ಇನ್ನು ಧರೆ ಕುಸಿದ ಪರಿಣಾಮ ಅದರಲ್ಲಿದ್ದ ಅಡಿಕೆ ಮರಗಳು ಮಣ್ಣಿನ ಜೊತೆ ಕುಸಿದು ಮನೆ ಅಂಗಳಕ್ಕೆ ಬಂದು ನಿಂತಿದೆ. ಪರಿಣಾಮ ಮನೆಯವರು ಅದೃಷ್ಟವಶಾತ್ ಬಚಾವಾಗಿದ್ದಾರೆ. ಸದ್ಯ ಮನೆಯವರು ಸ್ಥಳಾಂತರಗೊಂಡಿದ್ದು, ಮನೆಯಲ್ಲಿರುವ ಮನೆಯಲ್ಲಿರುವ ಅಗತ್ಯ ಸಾಮಾಗ್ರಿಗಳನ್ನ ಬೇರೆಡೆ ಶಿಫ್ಟ್ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ್ದಾರೆ. ಬಳಿಕ ಬಂಟ್ವಾಳ ತಹಸಿಲ್ದಾರ್ ಗೆ ಕರೆ ಮಾಡಿ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪುಣಚ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಹರಿಪ್ರಸಾದ್ ಯಾದವ್, ಕಾರ್ಯದರ್ಶಿ ದಯಾನಂದ ಉಜಿರೆಮಾರ್, ಪಂಚಾಯತ್ ಅಧ್ಯಕ್ಷೆ ಬೇಬಿ, ಉಪಾಧ್ಯಕ್ಷರ ಮಹೇಶ್ ಶೆಟ್ಟಿ, ಸದಸ್ಯ ಉದಯ್ ಕುಮಾರ್ ದುಂಬೆ, ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕ ಹರೀಶ್ ಭಟ್, ಹಾಗೂ ವಿಶ್ವನಾಥ್ ಕುಲಾಲ್ ಉಪಸ್ಥಿತರಿದ್ದರು.