WAYANAD: ವಯನಾಡು ದುರಂತದಲ್ಲೊಂದು ಪವಾಡ!!
ವಯನಾಡು: ವಯನಾಡು ದುರಂತ ಇಡೀ ಮನುಕುಲವನ್ನೇ ದಿಗ್ಭ್ರಮೆಗೊಳಿಸಿದ ಘಟನೆ. ಎಷ್ಟೋ ಕುಟುಂಬಗಳು ಬೀದಿಗೆ ಬಿದ್ರೆ, ಇನ್ನೆಷ್ಟೋ ಕುಟುಂಬಗಳು ಉಸಿರನ್ನೇ ಚೆಲ್ಲಿವೆ. ಸಾವಿನ ಸಂಖ್ಯೆ ಮುನ್ನೂರರ ಗಟಿ ದಾಟಿದೆ. ಅಲ್ಲಿನ ಈಗಿನ ವಾಸ್ತವ ಚಿತ್ರ ನೋಡಿದ್ರೆ ಎಲ್ಲರ ಮನಸ್ಸಲ್ಲೂ ಕಣ್ಣೀರು ತರಿಸುವುದಂತೂ ಸತ್ಯ.
ಈ ನಡುವೆ ವಯನಾಡು ದುರಂತದಲ್ಲಿ ಪವಾಡವೇ ನಡೆದು ಹೋಗಿದೆ. ಹೌದು ಮೊನ್ನೆ ಭೂಕುಸಿತ ಉಂಟಾದ ವೇಳೆ ತಾಯಿ ಮತ್ತು ಮಗಳು, ಮಗಳ ಗಂಡ, ಮೊಮ್ಮಗ ಇರುವ ಒಂದು ಸಣ್ಣ ಕುಟುಂಬದ ಮನೆಗೆ ನೀರು, ಮಣ್ಣು, ಮರಗಳೆಲ್ಲ ಒಂದೇ ಸಮನೇ ಅಪ್ಪಳಿಸಿ ಮನೆಯೇ ಮುರಿದು ಬಿತ್ತು. ಈ ವೇಳೆ ಹೇಗೋ ಆ ಮನೆಯ ಅಡಿಯಿಂದ ಎಲ್ಲರೂ ಹೊರಗೆ ಬಂದು ಬಚಾವಾಗಿ ಬಂದರು. ಅಲ್ಲಿಂದ ಗುಡ್ಡದ ಪ್ರದೇಶಕ್ಕೆ ಓಡಿ ಹೋದರು. ಅಲ್ಲಿ ಮೇಲಿಂದ ಮೂರು ಗ್ರಾಮಗಳು ನೆಲಸಮವಾಗಿದನ್ನೂ ಕೂಡ ಕಣ್ಣಾರೆ ನೋಡಿದ್ದರು.
ಭೂಕುಸಿತದಿಂದ ಬಚಾವಾಗಿ ಬಂದ್ರೂ ಸಹ, ಅವರಿಗೆ ಕಾಡಿನಲ್ಲಿ ಓಡೋ ರಭಸಕ್ಕೆ ಒಂದು ಬೃಹದಾಕಾರದ (ಕೊಂಬನ್) ದೊಡ್ಡ ಕಾಡಾನೆ ಹಾಗೂ ಇನ್ನೆರೆಡು ಸಣ್ಣ ಕಾಡಾನೆಗಳು ಎದುರು ನಿಂತಿದ್ದವು. ಈ ವೇಳೆ ಮೊದಲೇ ಭಯದಲ್ಲಿದ್ದ ಆ ಸಣ್ಣ ಕುಟುಂಬ ಕಾಡಾನೆಯನ್ನು ನೋಡಿ ದಿಕ್ಕು ತೋಚದೆ ಕೈಮುಗಿದು ನಾವು ಈಗಾಗ್ಲೇ ದೊಡ್ಡ ದುರಂತದಿಂದ ಪಾರಾಗಿ ಬಂದಿದ್ದೇವೆ. ನಾವು ಬದುಕಿದ್ದೇ ಹೆಚ್ಚು, ನಮ್ಮನ್ನು ಏನೂ ಮಾಡಬೇಡ ಎಂದು ಕಣ್ಣಿರು ಹಾಕಿದ್ದಾರೆ. ಬಳಿಕ ಆ ಕುಟುಂಬದ ಕಣ್ಣೀರನ್ನು ಕಂಡು ಕಾಡಾನೆ ಅವರನ್ನ ಏನೂ ಮಾಡದೇ ಅವರಿಗೆ ತನ್ನ ಕಾಲಿನ ಬುಡದಲ್ಲೇ ಬೆಳಗ್ಗೆಯ ವರೆಗೆ ಆಶ್ರಯ ನೀಡಿದೆ. ಎಲ್ಲಾ ಮುಗೀತು ಅನ್ನೋವಾಗ ಆ ಕಾಡಾನೆಯೂ ಇವರನ್ನ ಅಪಾಯಕ್ಕೆ ತಲ್ಲದೇ ನೋಡಿಕೊಂಡಿದೆ. ಇದನ್ನ ಆ ಕುಟುಂಬ ಕಣ್ಣೀರುಟ್ಟು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಎಲ್ಲಾ ಮುಗಿದು ಹೋಯಿತು ಅನ್ನೋವಾಗ ದೇವನೊಬ್ಬನಿದ್ದಾನೆ ಅನ್ನೋದಕ್ಕೆ ಇದೇ ಸಾಕ್ಷಿ.


