PUTHILA: ಅರುಣ್ ಕುಮಾರ್ ಪುತ್ತಿಲರೇ ನೀವ್ ಬಿಜೆಪಿಯಲ್ಲಿದ್ದೀರೋ? ಪರಿವಾರದಲ್ಲಿದ್ದಿರೋ
ಪುತ್ತೂರು: ಅರುಣ್ ಕುಮಾರ್ ಪುತ್ತಿಲ...ಈ ಹೆಸರು ಪುತ್ತೂರು ಮಾತ್ರವಲ್ಲ ಇಡೀ ರಾಜ್ಯಕ್ಕೆ ಚುನಾವಣೆ ಸಂದರ್ಭದಲ್ಲಿ ಜನಜನಿತ. ಪುತ್ತಿಲ ಅಂದ್ರೆ ಒಂದು ಬ್ರ್ಯಾಂಡ್ ಆಗಿತ್ತು. ಆದ್ರೆ ಇದೀಗ ಪುತ್ತಿಲ ಅವರದ್ದು ಎನ್ನಲಾದ ವಾಯ್ಸ್ ಮೆಸೆಜ್ ಒಂದು ಕರವಾಳಿಯಾದ್ಯಂತ ಹರಿದಾಡುತ್ತಿದ್ದು, ಅವರ ಅಭಿಮಾನಿಗಳನ್ನೇಕೆ ಇಡೀ ಕರಾವಳಿ ಭಾಗದ ಜನರಲ್ಲಿ ತಲ್ಲಣಗೊಳಿಸಿದೆ.
ಹಣಕಾಸಿನ ವಿಚಾರವಾಗಿ ಆಡಿಯೋದಲ್ಲಿ ಪ್ರಸ್ತಾಪ ಮಾಡಿರುವುದಂತೂ ಭಾರೀ ಸದ್ದು ಮಾಡಿದೆ. ಏನೇ ಆಗ್ಲೀ ಪುತ್ತೂರಿನಲ್ಲಿ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಇಡೀ ರಾಜ್ಯದಲ್ಲೇ ಸದ್ದು ಮಾಡಿರುವುದು ಇತಿಹಾಸ. ಆದ್ರೆ ಅದರ ಒಳಗುಟ್ಟು ಆಡಿಯೋದ ಮೂಲಕ ಹೊರಬಂದಿರುವುದು ಎಷ್ಟು ಸತ್ಯ ಅನ್ನೋದಕ್ಕೆ ಸ್ವತಃ ಪುತ್ತಿಲರೇ ಮಾಧ್ಯಮದ ಮುಂದೆ ಬಂದು ನಿಲ್ಲಬೇಕಿದೆ.
ಈ ನಡುವೆ ಪುತ್ತಿಲ ಅವರು ಬಿಜೆಪಿಯಲ್ಲಿದ್ದಾರೋ ಅಥವಾ ಪುತ್ತಿಲ ಪರಿವಾರದಲ್ಲಿದ್ದಾರೋ ಅನ್ನೋದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಹೌದು ಒಂದ್ಕಡೆ ಆಡಿಯೋ ಬಾಂಬ್ ತಲ್ಲಣ ಉಂಟುಮಾಡಿದ್ರೆ. ಇತ್ತ ಅರುಣ್ ಕುಮಾರ್ ಅವರ ಪರವಾಗಿ ಯಾರೋ ಮೂರನೇ ವ್ಯಕ್ತಿ ಸ್ಪಷ್ಟಣೆ ಕುರಿತ ಪ್ರಕಟಣೆಯನ್ನ ಪುತ್ತಿಲ ಪರಿವಾರದ ಲೆಟರ್ ಹೆಡ್ ನಲ್ಲಿ ರಿಲೀಸ್ ಮಾಡಿದ್ದಾರೆ. ಹಾಗಿದ್ರೆ ಪುತ್ತಿಲ ಅವರು ಬಿಜೆಪಿಯಲ್ಲಿಲ್ವ ಅನ್ನೋದು ಕರಾವಳಿಯ ಜನರಲ್ಲಿರುವ ಪ್ರಶ್ನೆ. ಇನ್ನೂ ಕೂಡ ಪುತ್ತಿಲ ಪರಿವಾರದಲ್ಲೇ ಗುರುತಿಸಿಕೊಂಡಿದ್ದಾರಾ ಅನ್ನೋ ಪ್ರಶ್ನೆ ಕೂಡ ಎದುರಾಗಿದೆ.

