SWAMY KORAGAJJA: ದೈವಸ್ಥಾನಕ್ಕೆ ಬೀಗ; ಮುನಿದ ಕೊರಗಜ್ಜ
ಮೈಸೂರು: ಕರಾವಳಿಯಲ್ಲಿ ದೈವಾರಾಧನೆ ಅಂದ್ರೆ ಅಪಾರ ಭಕ್ತಿ. ರಿಷಬ್ ಶೆಟ್ಟಿ ಅವರ ಕಾಂತಾರ ಚಲನಚಿತ್ರ ಬಿಡುಗಡೆಯಾದ ಬೆನ್ನಲ್ಲೇ ಕರಾವಳಿಯ ದೈವಾರಾಧನೆ ಬಗ್ಗೆ ಇಡೀ ದೇಶದಾದ್ಯಂತ ಕುತೂಹಲ ಹೆಚ್ಚಾಗಿತ್ತು. ಈ ಬೆನ್ನಲ್ಲೇ ಮೈಸೂರಿನಲ್ಲಿ ಕೊರಗಜ್ಜ ದೈವಸ್ಥಾನ ಆರಂಭವಾಗಿತ್ತು. ಜನ ಮರುಳೋ, ಜಾತ್ರೆ ಮರುಳೋ ಎಂಬಂತೆ ಜನರು ಇಲ್ಲಿ ನೆರೆಯುತ್ತಿದ್ದರು.
ಆದರೆ ಇದೀಗ ಮೈಸೂರಿನ ಕೊರಗಜ್ಜ ಕ್ಷೇತ್ರದಲ್ಲಿ ಭೂ ವಿವಾದ, ಸಂಬಂಧಿಕರ ಕಲಹದಿಂದಾಗಿ ಅಲ್ಲಿನ ಆರಾಧನೆ ನಿಂತು ಹೋಗಿದೆ. ಅಷ್ಟೇ ಅಲ್ಲ ಕೊರಗಜ್ಜ ದೈವಸ್ಥಾನಕ್ಕೆ ಬೀಗ ಹಾಕಲಾಗಿದೆ. ಈ ಹಿಂದೆಯೂ ದೈವಸ್ಥಾನದ ಟ್ರಸ್ಟಿಗಳ ನಡುವೆ ನಡೆದಿದ್ದ ಜಗಳಕ್ಕೆ ಬೀಗ ಹಾಕಲಾಗಿತ್ತು. ನಂತರ ದೈವಾರಾಧಕ ತೇಜುಕುಮಾರ್ ಹಾಗೂ ಪತ್ನಿ ನಡುವೆ ಕಲಹ ಉಂಟಾಗಿತ್ತು.
ಸದ್ಯ ದೈವಸ್ಥಾನಕ್ಕೆ ಬೀಗ ಜಡಿದು ದೈವಾರಾಧಕ ತೇಜುಕುಮಾರ್ ನಾಪತ್ತೆಯಾಗಿದ್ದಾರೆ. ಸ್ಥಳಕ್ಕೆ ಈಗಾಗಲೇ ಪೊಲೀಸರು, ತಹಶಿಲ್ದಾರ್ ಸೇರಿ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಆಶ್ಚರ್ಯ ಎಂಬಂತೆ ಕಾಂತಾರ ಸಿನಿಮಾ ಬಿಡುಗಡೆಯ ನಂತರ ಮೈಸೂರಿನಲ್ಲೂ ಕರಾವಳಿಯ ಗುಳಿಗ- ಕೊರಗಜ್ಜ ದೈವಗಳ ಆರಾಧನೆ ಶುರುವಾಗಿತ್ತು. ಮೈಸೂರಿನ ನಗರದ ದಟ್ಟಗಳ್ಳಿ ಪ್ರದೇಶದಲ್ಲಿ ರಾಜಗುಳಿಗ ದೈವಸ್ಥಾನವು 2022 ರ ನವೆಂಬರ್ ತಿಂಗಳಲ್ಲಿ ಸ್ಥಾಪನೆಗೊಂಡಿತ್ತು. ರಾಜಗುಳಿಗ ದೈವಸ್ಥಾನವು ಸ್ಥಾಪನೆಗೊಂಡ ನಂತರ ಸ್ಥಳೀಯರಿಗೆ ರಾಜಗುಳಿಗ ದೈವದಲ್ಲಿ ಅಪಾರ ನಂಬಿಕೆ ಹೆಚ್ಚುತ್ತಲೇ ಇದೆ.
ಇದೀಗ ಮೈಸೂರು ಕೊರಗಜ್ಜನ ಕ್ಷೇತ್ರದಲ್ಲಿ ಆರಾಧನೆ ಸರಿಯಾಗಿ ನಡಿಯುತ್ತಿರಲಿಲ್ವ ಎಂಬುದು ಪ್ರಶ್ನೆ. ಇಲ್ಲಿನ ಟ್ರಸ್ಟಿಗಳು ಹಣದಲ್ಲಿ ಏನಾದ್ರೂ ಗೋಲ್ ಮಾಲ್ ಮಾಡಿದ್ರಾ? ಜಾಗಕ್ಕಾಗಿ ಅಲ್ಲಿನವರ ನಡುವೆ ಕಲಹ ಉಂಟಾಗಿದ್ದು, ಇವೆಲ್ಲೆವೂ ಕೊರಗಜ್ಜ ದೈವದ ಕೋಪಕ್ಕೆ ಕಾರಣವಾಯ್ತಾ? ಎಂಬುದು ಸದ್ಯದ ಕುತೂಹಲ.