PUTTUR: ಆಡಿಯೋ ವೈರಲ್; ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
ಪುತ್ತೂರು: ಕರಾವಳಿಯಲ್ಲಿ ಭಾರೀ ವೈರಲ್ ಆದ ಅರುಣ್ ಕುಮಾರ್ ಪುತ್ತಿಲ ಹಾಗೂ ಅವರ ಗೆಳತಿಯ ಆಡಿಯೋಗೆ ಸಂಬಂಧಿಸಿ ಇದೀಗ ಬೆದರಿಕೆ ಕರೆಗಳು ಬರುವ ಹಂತಕ್ಕೆ ತಲುಪಿದೆ. ಹೌದು ಮೂಲತಃ ಶಿರಸಿ ಮೂಲದ ಮಹಿಳೆ ಪುತ್ತೂರಿನ ಸಾಮೆತ್ತಡ್ಕದಲ್ಲಿ ವಾಸ್ತವ್ಯವಿದ್ದಾರೆ. ಮಹಿಳೆ ಮತ್ತು ಪುತ್ತಿಲ ಅವರು ಮಾತನಾಡಿದ ಆಡಿಯೋ ಕರಾವಳಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಆ ಆಡಿಯೋದಲ್ಲಿ ಮಾತನಾಡಿರುವ ಮಹಿಳೆಗೆ ಬೆದರಿಕೆ ಕರೆಗಳು ಬರುತ್ತಿದ್ದು, ಈ ಸಂಬಂಧ ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬೆದರಿಕೆಗೆ ಸಂಬಂಧಿಸಿ ಆರೋಪ ಮಾಡಿರುವ ಮಹಿಳೆ ನಿನ್ನೆ ರಾತ್ರಿ ಪುತ್ತಿಲ ಪರಿವಾರದ ಮಾಜಿ ಸದಸ್ಯ ರಾಜಾರಾಂ ಭಟ್ ಅವರೊಂದಿಗೆ ಪುತ್ತೂರು ನಗರ ಠಾಣೆಗೆ ಆಗಮಿಸಿದ್ದರು. ಆಡಿಯೋ ಸಂಬಂಧ ಹಲವಾರು ಬೆದರಿಕೆ ಕರೆಗಳು ಬರುತ್ತಿದೆ ಎಂದು ಮಹಿಳೆ ದೂರು ನೀಡಿದ್ದಾರೆ. ಇನ್ನು ಮಹಿಳೆ ಪೊಲೀಸ್ ಠಾಣೆಯಿಂದ ಮನೆಗೆ ಹಿಂತಿರುಗಿದಾಗ ಪೊಲೀಸರು ಭದ್ರತೆ ನೀಡಿದ್ದಾರೆ.
ಸದ್ಯ ಈ ಆಡಿಯೋ ಬೆದರಿಕೆಗೆ ಸಂಬಂಧಿಸಿ ಸಂತ್ರಸ್ತೆ ಮಹಿಳೆಗೆ ಸೂಕ್ತ ಭದ್ರತೆ ಒದಗಿಸುವಂತೆ ಗೃಹ ಇಲಾಖೆ ಪುತ್ತೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.