OLYMPICS 2024: ಕುಸ್ತಿ ಫೈನಲ್ ಪಂದ್ಯದಿಂದ ವಿನೇಶ್ ಪೋಗಟ್ ಅನರ್ಹ; ಭಾರತದ ಚಿನ್ನದ ಕನಸು ಭಗ್ನ!
Wednesday, August 7, 2024
ಪ್ಯಾರಿಸ್: ಕುಸ್ತಿ ಪಂದ್ಯಾಟದಲ್ಲಿ ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಕುಸ್ತಿ ಪಟು ವಿನೇಶ್ ಫೋಗಟ್ ಅನರ್ಹರಾಗಿದ್ದಾರೆ. ನಿಗದಿತ ತೂಕಕ್ಕಿಂತ 100 ಗ್ರಾಂ ಹೆಚ್ಚು ಇರುವ ಕಾರಣಕ್ಕೆ ವಿನೇಶ್ ಪೋಗಟ್ ಅನರ್ಹರಾಗಿದ್ದಾರೆ. ಒಲಿಂಪಿಕ್ಸ್ ತೀರ್ಪುಗಾರರ ಈ ನಿರ್ಧಾರದ ವಿರುದ್ಧ ಭಾರತೀಯರು ಕಿಡಿಕಾರಿದ್ದಾರೆ. 50 ಕೆಜಿ ಕುಸ್ತಿಯಲ್ಲಿ ವಿನೇಶ್ ಫೋಗಟ್ ಫೈನಲ್ ಪ್ರವೇಶಿಸಿದ್ದರು. ಇಂದು ಮಧ್ಯ ರಾತ್ರಿ 12 ಗಂಟೆ ನಂತರ ಫೈನಲ್ ಪಂದ್ಯ ನಡೆಯಬೇಕಿತ್ತು. ಆದ್ರೀಗ ವಿನೇಶ್ ಪೋಗಟ್ ಅನರ್ಹರಾಗಿ ಒಲಿಂಪಿಕ್ಸ್‌ನಿಂದ ಹೊರ ಬಿದ್ದಿದ್ದಾರೆ.ಅಂತಿಮ ಪಂದ್ಯದ ಮುನ್ನಾದಿನದಂದು ಭಾರತೀಯ ಕುಸ್ತಿಪಟು ವಿನೇಶ್ ಪೋಗಟ್ ಅಧಿಕ ತೂಕ ಹೊಂದಿದ್ದರು. ವರದಿಗಳ ಪ್ರಕಾರ, ವಿನೇಶ್ ರಾತ್ರಿಯಿಡೀ ನಿದ್ದೆ ಮಾಡಲಿಲ್ಲ. ಜಾಗಿಂಗ್, ಸ್ಕಿಪ್ಪಿಂಗ್, ಸೈಕ್ಲಿಂಗ್ ಮಾಡುತ್ತಲೇ ಇದ್ದರಂತೆ.ಇಂದು ಬೆಳಿಗ್ಗೆ ವಿನೇಶ್ ಫೋಗಟ್ 50 ಕೆಜಿಗಿಂತ 100 ಗ್ರಾಂ ತೂಕವನ್ನು ಹೆಚ್ಚು ಹೊಂದಿದ್ದರು.