Kambala 2024-25: ಶಿವಮೊಗ್ಗಕ್ಕೆ ಲಗ್ಗೆಯಿಡಲಿದೆ ತುಳುನಾಡ ಕ್ರೀಡೆ; ಕಂಬಳ ವೇಳಾಪಟ್ಟಿ ಪ್ರಕಟ!
ಮಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ಮುಗಿಸಿದ ಬೆನ್ನಲ್ಲೇ ಈ ವರ್ಷ ಮತ್ತೊಮ್ಮೆ ತುಳುನಾಡ ಜಾನಪದ ಕ್ರೀಡೆಯು ಸೀಮೋಲ್ಲಂಘನ ಮಾಡಲು ತಯಾರಾಗಿದೆ. ಈ ಋತುವಿನ ಕಂಬಳ ವೇಳಾಪಟ್ಟಿಯಲ್ಲಿ ಮಲೆನಾಡು ಶಿವಮೊಗ್ಗದಲ್ಲಿ ಕಂಬಳ ನಡೆಸಲು ಕಂಬಳ ಸಮಿತಿ ನಿರ್ಧರಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಎಪ್ರಿಲ್ 19 ರಂದು ಶಿವಮೊಗ್ಗದಲ್ಲಿ ಕಂಬಳ ಕ್ರೀಡೆಯು ಮೇಳೈಸಲಿದೆ. ಈ ಮೂಲಕ ರಾಜಧಾನಿ ಬೆಂಗಳೂರಿಗೆ ತಲುಪಿದ್ದ ಕರಾವಳಿಯ ಕಂಬಳ ಈ ಬಾರಿ ಶಿವಮೊಗ್ಗಕ್ಕೂ ಲಗ್ಗೆ ಇರಿಸಿದಂತಾಗಲಿದೆ.
ಈ ಋತುವಿನ ಕಂಬಳದ ವೇಳಾಪಟ್ಟಿ ಸಿದ್ಧಪಡಿಸಲು ಶನಿವಾರ ಸೇರಿದ್ದ ಸಭೆಯಲ್ಲಿ ಶಿವಮೊಗ್ಗ ಕಂಬಳದ ದಿನಾಂಕವನ್ನು ನಿಗದಿಪಡಿಸಲಾಯಿತು. ಜೊತೆಗೆ ಬೆಂಗಳೂರು ಕಂಬಳವೂ ಈ ಋತುವಿನಲ್ಲಿ ನಡೆಯಲಿದೆ. ಬೆಂಗಳೂರು ಕಂಬಳ ನಡೆದ ಬಳಿಕ ಮತ್ತೊಮ್ಮೆ ನಡೆಯುತ್ತಾ, ಇಲ್ವ ಅನ್ನೋದರ ಬಗ್ಗೆ ಸಂಶಯವಿತ್ತು. ಆದರೆ, ಕಂಬಳ ಸಮಿತಿ ಆ ಗೊಂದಲಕ್ಕೆ ತೆರೆ ಎಳೆದಿದ್ದು ಮೊದಲ ಕಂಬಳ ಕೂಟವನ್ನು ಬೆಂಗಳೂರಿನಲ್ಲಿಯೇ ಆಯೋಜಿಸಿದೆ. ಬೆಂಗಳೂರಿನಲ್ಲಿ ಮೊದಲ ಕಂಬಳ ಅಕ್ಟೋಬರ್ 26ರಂದು ಮತ್ತು ಕೊನೆಯ ಕಂಬಳವನ್ನು ಮುಂದಿನ ವರ್ಷದ ಏಪ್ರಿಲ್ 19ರಂದು ಶಿವಮೊಗ್ಗದಲ್ಲಿ ಆಯೋಜಿಸಲು ತೀರ್ಮಾನಿಸಿದೆ.
ಈ ಋತುವಿನಲ್ಲಿ ಒಟ್ಟು 26 ಕಂಬಳಗಳನ್ನು ನಡೆಸಲಾಗುವುದು, ಮಂಗಳೂರಿನ ಪಿಲಿಕುಳ ಕಂಬಳಕ್ಕೆ ಮತ್ತೆ ಚಾಲನೆ ನೀಡಲಾಗುತ್ತದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಬೆಳಪು ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ಈ ಋತುವಿನ ಕಂಬಳ ವೇಳಾಪಟ್ಟಿ ಹೀಗಿರಲಿದೆ
(2024ರ ವೇಳಾಪಟ್ಟಿ)
ಅಕ್ಟೋಬರ್ 26 - ಬೆಂಗಳೂರು
ನವೆಂಬರ್ 9 – ಪಿಲಿಕುಳ
ನವೆಂಬರ್ 16 – ಪಣಪಿಲ
ನವೆಂಬರ್ 23 – ಕೊಡಂಗೆ
ನವೆಂಬರ್ 30 – ಕಕ್ಕೆಪದವು
ಡಿಸೆಂಬರ್ 7 – ಹೊಕ್ಕಾಡಿಗೋಳಿ
ಡಿಸೆಂಬರ್ 14 – ಬಾರಾಡಿಬೀಡು
ಡಿಸೆಂಬರ್ 21 – ಮೂಲ್ಕಿ
ಡಿಸೆಂಬರ್ 28 – ಮಂಗಳೂರು
(2025ರ ವೇಳಾಪಟ್ಟಿ)
ಜನವರಿ 4 - ಮಿಯ್ಯಾರು
ಜನವರಿ 11 – ನರಿಂಗಾನ
ಜನವರಿ 18 - ಅಡ್ವೆ
ಜನವರಿ 25 - ಮೂಡುಬಿದಿರೆ
ಫೆಬ್ರವರಿ 1 - ಐಕಳ
ಫೆಬ್ರವರಿ 8 - ಜೆಪ್ಪು
ಫೆಬ್ರವರಿ 15 - ವಾಮಂಜೂರು
ಫೆಬ್ರವರಿ 22 - ಕಟಪಾಡಿ
ಮಾರ್ಚ್ 1 - ಪುತ್ತೂರು
ಮಾರ್ಚ್ 8 - ಬಂಗಾಡಿ
ಮಾರ್ಚ್ 15 - ಬಂಟ್ವಾಳ
ಮಾರ್ಚ್ 22 – ಉಪ್ಪಿನಂಗಡಿ
ಮಾರ್ಚ್ 29 - ವೇಣೂರು
ಎಪ್ರಿಲ್ 5 - ಬಳ್ಕುಂಜೆ
ಎಪ್ರಿಲ್ 12 - ಗುರುಪುರ
ಎಪ್ರಿಲ್ 19 - ಶಿವಮೊಗ್ಗ