PUTTUR: ಮಾದಕ ವ್ಯಸನಿಗಳನ್ನ ಬೆನ್ನಟ್ಟಿ ಹಿಡಿದ ಉಪ್ಪಿನಂಗಡಿ ಪೊಲೀಸರು!!
Saturday, August 10, 2024
ಪುತ್ತೂರು: ನಿಷೇಧಿತ ಎಂಡಿಎಂಎ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಮೂವರನ್ನ ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಬಂಟ್ವಾಳ ತಾಲೂಕಿನ ಮಹಮ್ಮದ್ ನಾಸೀರ್(24), ಗಡಿಯಾರ ನಿವಾಸಿ ಮಹಮ್ಮದ್ ಆಸೀಫ್(21) ಮತ್ತು ಬುಡೋಳಿ ನಿವಾಸಿ ಸಿನಾನ್ ಎಂದು ಗುರುತಿಸಲಾಗಿದೆ.
ನೆಕ್ಕಿಲಾಡಿ ಜಂಕ್ಷನ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಆಟೋ ರಿಕ್ಷಾದಲ್ಲಿ ಬಂದ ಆರೋಪಿಗಳು ವಾಹನ ನಿಲ್ಲಿಸದೆ ಚಲಾಯಿಸಿ ಮುಂದೆ ಹೋಗಿದ್ದಾರೆ. ಅವರನ್ನ ಬೆನ್ನಟ್ಟಿ ಹಿಡಿದ ಉಪ್ಪಿನಂಗಡಿ ಪೊಲೀಸರು, ವಿಚಾರಿಸಿದಾಗ ಸರಿಯಾದ ಉತ್ತರ ನೀಡದೇ ಚಡಪಡಿಸಿದ್ದಾರೆ. ಹಾಗಾಗಿ ಆಟೋ ರಿಕ್ಷಾವನ್ನ ಪರಿಶೀಲನೆ ಮಾಡಿದ ಪೊಲೀಸರಿಗೆ ಸುಮಾರು 18720 ಮೌಲ್ಯದ 9.36 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು ಮತ್ತು 15 ಚಿಕ್ಕ ಪ್ಲಾಸ್ಟಿಕ್ ಕವರ್ ಗಳು ಪತ್ತೆಯಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.