Wayanad Tragedy: 133 ಮೃತದೇಹ ಪತ್ತೆ, 400 ಕುಟುಂಬಗಳು ಅತಂತ್ರ!
Wednesday, July 31, 2024
ವಯನಾಡು: ಜಿಲ್ಲೆಯ ಮೂರು ಗ್ರಾಮಗಳಲ್ಲಿ ಸೃಷ್ಟಿಯಾದ ಭೀಕರ ಭೂಕುಸಿತ, ಪ್ರಳಯದಿಂದಾಗಿ ಇದುವರೆ ಮೃತಪಟ್ಟವರ ಸಂಖ್ಯೆ 133ಕ್ಕೆ ಏರಿಕೆ ಆಗಿದೆ. ಇನ್ನುಳಿದಂತೆ 98 ಜನರಿಗಾಗಿ ಹುಡುಕಾಟ ಮುಂದುವರೆದಿದೆ. ರಕ್ಷಣಾ ಕಾರ್ಯಾಚರಣೆ ಮೂಲಕ ಮಕ್ಕಳು, ಮಹಿಳೆಯರು ಸೇರಿ ಒಟ್ಟು 481 ಮಂದಿಯನ್ನು ರಕ್ಷಿಸಲಾಗಿದೆ.
ಸದ್ಯ ಕಾಳಜಿ ಕೇಂದ್ರಗಳಲ್ಲಿ 3069 ಮಂದಿ ಆಶ್ರಯ ಪಡೆದಿದ್ದಾರೆ. ಘಟನೆಯಿಂದ 400 ಕ್ಕೂ ಅಧಿಕ ಕುಟುಂಬಗಳು ಅತಂತ್ರವಾಗಿದೆ. ಚಲಿಯಾರ್ ನದಿಯಲ್ಲಿ 31 ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಒಟ್ಟಾರೆಯಾಗಿ 39 ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದ್ದು, ಜಿಲ್ಲೆಯಾದ್ಯಂತ ಒಟ್ಟು 45 ಆರೈಕೆ ಕೇಂದ್ರಗಳನ್ನು ತೆರೆಯಲಾಗಿದೆ. 32 ಮೃತದೇಹಗಳನ್ನು ಈಗಾಗಲೇ ಮೃತರ ವಾರೀಸುದಾರರಿಗೆ ತಲುಪಿಸಲಾಗಿದೆ.
ಮಂಗಳವಾರ ಬೆಳಗಿನ ಜಾವ ನಡೆದ ಸರಣಿ ಭೂಕುಸಿತ ವಯನಾಡು ಜಿಲ್ಲೆಯ ಮೂರು ಗ್ರಾಮಗಳನ್ನು ನಲುಗಿ ಹೋಗುವಂತೆ ಮಾಡಿದೆ.