MANGALORE: 'ರೀಲ್ಸ್' ಪ್ರೀಯರಿಗೆ ದ.ಕ. ಜಿಲ್ಲಾಧಿಕಾರಿ ನೀಡಿದ್ರು ಎಚ್ಚರಿಕೆ!!
ಪುತ್ತೂರು: ಅಪಾಯಕಾರಿ ರೀಲ್ಸ್ ಮಾಡೋರಿಗೆ ಖಡಕ್ ಎಚ್ಚರಿಕೆ ಸಂದೇಶಯೊಂದನ್ನ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರವಾನಿಸಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವ್ರು, ನದಿತಟದಲ್ಲಿ ಅಪಾಯ, ಎಚ್ಚರಿಕೆ ಎಂಬ ಫಲಕಗಳನ್ನ ಸ್ಥಳೀಯಾಡಳಿತ ಅಥವಾ ಜಿಲ್ಲಾಡಳಿತ ಹಾಕಿದ್ದಲ್ಲಿ ಅಂತಹ ಕಡೆಗಳಲ್ಲೇ ಬಂದು ರೀಲ್ಸ್ ಮಾಡಿ ಪೋಸ್ಟ್ ಹಾಕಿ ಸಂಭ್ರಮಿಸುವವರ ಮೇಲೆ ನಿಗಾ ಇಡಲಾಗಿದೆ ಎಂದು ಹೇಳಿದ್ರು.
ಬೀಚ್, ನದಿ, ಪ್ರವಾಸಿ ತಾಣಗಳಲ್ಲಿ ಈಗಾಗ್ಲೇ ಅಪಾಯಕಾರಿ ಬೋರ್ಡ್ ಅಳವಡಿಸಲಾಗಿದೆ. ಅಪಾಯಕಾರಿ ಬೋರ್ಡ್ ಜೊತೆಗೆ ಕೆಲವು ಕಾನೂನು ಕೂಡ ಅನ್ವಯಿಸುತ್ತವೆ. ಕಾನೂನು ಮೀರಿ ರೀಲ್ಸ್ ಅಥವಾ ಸಾಹಸ ಮಾಡಿದರೆ ಎಫ್ ಐ ಆರ್ ದಾಖಲಿಸಲಾಗುವುದು ಎಂದರು.
ಇನ್ನು ಕಾಡಿನ ಮಧ್ಯೆ ಹಾಗೂ ಇತರ ರಿಸ್ಕಿ ಜಾಗಗಳಲ್ಲಿ ರೀಲ್ಸ್ ಮಾಡಲು ಹೋಗಬೇಡಿ. ಪ್ರಾಕೃತಿಕ ವಿಕೋಪ ಯಾವಾಗ, ಹೇಗೆ ನಡೆಯುತ್ತೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಹಾಗಾಗಿ ಮಾಧ್ಯಮಗಳ ಮೂಲಕ ರೀಲ್ಸ್ ಮಾಡೋವರಿಗೆ ವಿನಂತಿ ಮಾಡುತ್ತೇನೆ. ಯಾವತ್ತೂ ಅಪಾಯಕಾರಿ ರೀಲ್ಸ್ ಮಾಡುವ ದುಸ್ಸಾಹಸಕ್ಕೆ ಮುಂದಾಗಬೇಡಿ ಎಂದು ಅವರು ಹೇಳಿದರು.
ಇನ್ನು ನಿನ್ನೆಯೊಂದು ಹುಚ್ಚು ಸಾಹಸಿ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಪಾಣೆಮಂಗಳೂರಿನ ಹಳೆ ಬ್ರಿಡ್ಜ್ ಮೇಲಿಂದ ಸಾಹಸಿ ಹುಡುಗರು ನದಿಗೆ ಧುಮುಕುವ ವೀಡಿಯೋವೊಂದು ಭಾರೀ ವೈರಲ್ ಆಗಿತ್ತು. ಇದಕ್ಕೆ ಸಂಬಂಧಿಸಿ ಜಿಲ್ಲಾಧಿಕಾರಿ ಅವ್ರು ಈ ಎಚ್ಚರಿಕೆ ಸಂದೇಶವನ್ನ ರವಾನಿಸಿದ್ದಾರೆ.
