ಕೊಲ್ಲೂರಿನಲ್ಲಿ ದರ್ಶನ್ ಪತ್ನಿಯಿಂದ ನವಚಂಡಿಕಾ ಯಾಗ! ಡಿಕೆಶಿ ಭೇಟಿ ಬಳಿಕ ಶಕ್ತಿ ದೇವತೆಯ ಮೊರೆ!
ಉಡುಪಿ:
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಗುರುವಾರ ರಾತ್ರಿ ಆಗಮಿಸಿದ್ದಾರೆ. ಮೂಕಾಂಬಿಕಾ ದೇವಿಯ ದರ್ಶನ ಪಡೆದ ವಿಜಯಲಕ್ಷ್ಮಿ ಬಳಿಕ
ಕೊಲ್ಲೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಬೆಳಗ್ಗೆ ವಿಜಯಲಕ್ಷ್ಮಿ ಅವರು ನವ ಚಂಡಿಕಾ
ಹೋಮದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಮೂಕಾಂಬಿಕೆ ದೇವಿಗೆ ವಿಶೇಷ ಪೂಜೆ ಸಂಕಲ್ಪ ಮಾಡಲಿದ್ದಾರೆ.
ಸದ್ಯ ವಿಜಯಲಕ್ಷ್ಮಿ ಪತಿ ನಟ ದರ್ಶನ್
ಕೊಲೆ ಕೇಸ್ ನಲ್ಲಿ ಜೈಲು
ಪಾಲಾಗಿದ್ದು, ಅವರ ಬಿಡುಗಡೆಗಾಗಿ ಎದುರು
ನೋಡುತ್ತಿದ್ದಾರೆ. ಅದರಂತೆ ದರ್ಶನ್ ಆರೋಪಮುಕ್ತವಾಗಿ ಸೆರೆವಾಸದಿಂದ ಹೊರಬರಲಿ ಎಂದು ಶುಕ್ರವಾರ ಕೊಲ್ಲೂರು
ಮೂಕಾಂಬಿಕ ದೇವಿಗೆ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಲಿದ್ದಾರೆ
ಎಂದು ಮಾಹಿತಿ ತಿಳಿದುಬಂದಿದೆ.
ಬುಧವಾರವಷ್ಟೇ ದರ್ಶನ್ ಪತ್ನಿ, ಪುತ್ರ ಹಾಗೂ ಸಹೋದರ ದಿನಕರ್, ನಿರ್ದೇಶಕ ಜೋಗಿ ಪ್ರೇಮ್ ಇತರರು ಸೇರಿಕೊಂಡು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ಇದಾದ ಬಳಿಕ ವಿಜಯಲಕ್ಷ್ಮೀ ಅವರು ಟೆಂಪಲ್ ರನ್, ಪೂಜೆ, ಯಾಗಾದಿಗಳ ಮೊರೆ ಹೋಗಿದ್ದಾರೆ.