ರೆಖ್ಯಾದಲ್ಲಿ ಸುಂಟರಗಾಳಿ; ಮನೆ ಮೇಲೆ ಬಿದ್ದ ವಿದ್ಯುತ್ ಕಂಬ
Wednesday, July 24, 2024
ಬೆಳ್ತಂಗಡಿ: ಹಿಂದೆಂದೂ ಕಾಣದಂತ ಸುಂಟರಗಾಳಿಯೊಂದು ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಪ್ರೌಢ ಶಾಲೆ ಪರಿಸರದಲ್ಲಿ ಅಪ್ಪಳಿಸಿದ್ದು, ಗಾಳಿಯ ರಭಸಕ್ಕೆ ವಿದ್ಯುತ್ ಕಂಭಗಳು ಮನೆಯ ಮೇಲೆಯೇ ಬಿದ್ದು ಅಪಾರ ನಷ್ಟ ಉಂಟಾಗಿದೆ.
ನೇಲ್ಯಡ್ಕದ ಕೆ.ವಿ.ಅಬ್ರಹಾಂ ಅವರ ಮನೆ ಮೇಲೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ. ಇನ್ನು ಮನೆಯವರೆಲ್ಲ ಅಪಾಯದಿಂದ ಪಾರಾಗಿದ್ದಾರೆ. ಸಂಜೆ ವೇಳೆ ಪುತ್ತೂರು, ಸುಳ್ಯ, ಬೆಳ್ತಂಗಡಿ ಭಾಗದಲ್ಲಿ ಭಾರೀ ಮಳೆಯುಂಟಾಗಿದೆ. ಇದರಲ್ಲಿ ಬೆಳ್ತಂಗಡಿ ಭಾಗದಲ್ಲಿ ಬಿರುಸಿನ ಗಾಳಿ ಮಳೆ ಬಂದಿದೆ. ರೆಖ್ಯಾ ಪರಿಸರದಲ್ಲಿ ಹಿಂದೆಂದೂ ಕಾಣದಂತ ಸುಂಟರಗಾಳಿ ಅಪ್ಪಳಿಸಿದ್ದು, ಜನರು ಆತಂಕಗೊಂಡಿದ್ದರು.

.jpeg)
.jpeg)