ಪೆರ್ನೆಯ ಮೈರಾಕಟ್ಟೆಯಲ್ಲಿ ತೋಟಕ್ಕೆ ನುಗ್ಗಿದ ಮಳೆ ನೀರು
ಪುತ್ತೂರು: ಭಾರೀ ಮಳೆಗೆ ಪುತ್ತೂರಿನ ಪೆರ್ನೆ ಸಮೀಪದ ಮೈರಕಟ್ಟೆಯ ವಾಸು ಪೂಜಾರಿ ಎಂಬವರ ತೋಟಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಹೌದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಮೈರಕಟ್ಟೆಯ ವಾಸು ಪೂಜಾರಿ ಅವರ ಜಾಗವಿದೆ. ಇಲ್ಲಿವರೆಗೂ ಅವರ ತೋಟಕ್ಕೆ ಮಳೆ ನೀರು ನುಗ್ಗಿದ ಪ್ರಮೇಯವಿಲ್ಲ. ಆದ್ರೆ ಈ ಭಾರೀ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಧಾನಗತಿಯ ಕಾಮಗಾರಿ ಮತ್ತು ಕೆಲವೊಂದು ಲೋಪಗಳಿಂದಾಗಿ ಈ ಮಳೆ ನೀರು ತೋಟಕ್ಕೆ ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಈ ಕಾರಣದಿಂದಾಗಿ ವಾಸು ಪೂಜಾರಿ ಅವರ ಮನೆಗೆ ನಡೆದುಕೊಂಡು ಹೋಗಲು ಇದ್ದ ರಸ್ತೆಯೂ ಮುಚ್ಚಿಹೋಗಿದ್ದು, ಆ ಭಾಗ ಸಂಪೂರ್ಣ ಮಳೆಯಿಂದಾಗಿ ಜಲಾವೃತಗೊಂಡಿದೆ.
ತೋಟದಲ್ಲಿ ನೀರು ತುಂಬಿದ್ದು ಪಕ್ಕದಲ್ಲೇ ಇರುವ ಕೆರೆಯೊಂದು ಭರ್ತಿಯಾಗಿ ಇಡೀ ತೋಟವೇ ಕೆರೆಯಂತಾಗಿದೆ. ಇದರಿಂದಾಗಿ ಅಲ್ಲಿ ಕೆರೆಯಾವುದು ಎಂಬುದೇ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಜನರಿಗೂ ಅವರ ಮನೆಗೆ ಹೋಗಲು ಆತಂಕವಾಗಿದೆ. ಗೊತ್ತಿಲ್ಲದೇ ತೋಟದ ನಡುವೆ ಹೋದರೆ ಆಳವಾದ ಕೆರೆಗೆ ಬಿದ್ದು ಅಪಾಯುಂಟಾಗುವ ಪರಿಸ್ಥಿತಿ ಉಂಟಾಗಿದೆ. ಇವೆಲ್ಲದಕ್ಕೂ ಕಾರಣ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡವರದ್ದು ಎಂದು ವಾಸು ಪೂಜಾರಿ ಆರೋಪ ಮಾಡಿದ್ದಾರೆ.
ಯಾಕಂದ್ರೆ ಈ ಭಾಗದಲ್ಲಿ ಇಲ್ಲಿವರೆಗೆ ನಮ್ಮ ಮನೆಗೆ ಮಳೆ ನೀರು ನುಗ್ಗಿಲ್ಲ. ಆದ್ರೆ ಈ ಭಾರೀ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೀತಾ ಇದೆ. ರಸ್ತೆ ಬದಿಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಮಾಡಿದ್ದಾರೆ. ಆದ್ರೆ ಚರಂಡಿ ವ್ಯವಸ್ಥೆ ಮಾಡಿದ್ರೂ ಯಾವ ಪ್ರಯೋಜನಕ್ಕೂ ಸಾಧ್ಯವಾಗುತ್ತಿಲ್ಲ. ಈ ಚರಂಡಿಯಲ್ಲಿ ನೀರು ಹೋಗುತ್ತಿಲ್ಲ. ಬದಲಾಗಿ ಇದರಲ್ಲಿ ರಾಶಿ ರಾಶಿ ಮಣ್ಣು ಹೂಳು ತುಂಬಿ ಬ್ಲಾಕ್ ಆಗಿದೆ. ಅದನ್ನ ಬಿಡಿಸಿಕೊಡುವಂತ ಒಂದಿಷ್ಟೂ ಕೆಲಸವನ್ನ ಮಾಡಿಲ್ಲ. ಹಾಗಾಗಿಯೇ ನೀರು ರಸ್ತೆಯ ಮೂಲಕವೇ ನಮ್ಮ ತೋಟಕ್ಕೆ ನುಗ್ಗಿದೆ ಎಂದವರು ಆರೋಪ ಮಾಡಿದ್ದಾರೆ.
.jpeg)
