-->
ಪುತ್ತೂರು, ಉಪ್ಪಿನಂಗಡಿ ನಗರ ಭಾಗದಲ್ಲೇ ಅತೀ ಹೆಚ್ಚು ಡೆಂಗ್ಯೂ ಪ್ರಕರಣ ಪತ್ತೆ!!

ಪುತ್ತೂರು, ಉಪ್ಪಿನಂಗಡಿ ನಗರ ಭಾಗದಲ್ಲೇ ಅತೀ ಹೆಚ್ಚು ಡೆಂಗ್ಯೂ ಪ್ರಕರಣ ಪತ್ತೆ!!



ಪುತ್ತೂರು: ಪುತ್ತೂರು, ಕಡಬ ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದೆ. ಹೌದು ರಾಜ್ಯಾದ್ಯಂತ ಗಣನೀಯವಾಗಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಇತ್ತ ಕರಾವಳಿಯಲ್ಲೂ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗ್ತಾ ಇದೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಸುಮಾರು 177 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲಿ ಸುಮಾರು 76 ಪ್ರಕರಣಗಳು ಜೂನ್ ತಿಂಗಳಲ್ಲಿ ಕಾಣಿಸಿಕೊಂಡಿದೆ. ಮುಖ್ಯವಾಗಿ ನಮ್ಮ ಕರಾವಳಿ ಭಾಗದಲ್ಲಿ ಬಿಟ್ಟು ಬಿಟ್ಟು ಸುರಿಯುವ ಮಳೆಯಿಂದಾಗಿ ಹೆಚ್ಚಾಗಿ ಡೆಂಗ್ಯೂ ಸಂಬಂಧಿತ ಜ್ವರಗಳ ಕಾಣಿಸಿಕೊಳ್ಳುತ್ತವೆ. ಇದೀಗ ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಕಾಣಿಸಿಕೊಂಡಿರುವ 177 ಡೆಂಗ್ಯೂ ಪ್ರಕರಣಗಳಲ್ಲಿ ಎಲ್ಲಾ ರೋಗಿಗಳು ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದಾರೆ. ಆದ್ರೆ ಆಧಾರ್ ಕಾರ್ಡ್ ನಲ್ಲಿರುವ ವಿಳಾಸ ಪ್ರಕಾರ ಇವ್ರೆಲ್ಲ ಪುತ್ತೂರು, ಕಡಬ ತಾಲೂಕಿಗೆ ಒಳಪಟ್ಟವರು. ಹಾಗಾಗಿ ಈ ಡೆಂಗ್ಯೂ ಪ್ರಕರಣ ಪುತ್ತೂರು ಮತ್ತು ಕಡಬ ವ್ಯಾಪ್ತಿಗೆ ಒಳಪಡುತ್ತವೆ ಎಂದರು. 



ಇನ್ನು ಈಗಾಗ್ಲೇ ಕಡಬ, ಪುತ್ತೂರು ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಾಗಿದೆ. ಇದರಲ್ಲಿ ಹೆಚ್ಚಾಗಿ ಬೆಂಗಳೂರಿನಲ್ಲಿ ಡೆಂಗ್ಯೂ ಪಾಸಿಟಿವ್ ಕಾಣಿಸಿಕೊಂಡ ರೋಗಿಗಳು ಬಂದು ಇಲ್ಲಿ ಅಡ್ಮೀಟ್ ಆಗಿದ್ದಾರೆ. ಬೆಂಗಳೂರಿನಿಂದ ಬಂದಂತಹ ಡೆಂಗ್ಯೂ ರೋಗಿಗಳ ತೀವ್ರತೆ ಹೆಚ್ಚಾಗಿದೆ. ಆದ್ರೆ ಊರಿನ ಕೆಲವು ಡೆಂಗ್ಯೂ ಪ್ರಕರಣದ ರೋಗಿಗಳ ತೀವ್ರತೆ ತುಂಬಾನೇ ಕಡಿಮೆ ಇದೆ. ಇವೆರಡರ ವ್ಯತ್ಯಾಸ ಅಂದ್ರೆ ನಮ್ಮಲ್ಲಿ ಡೆಂಗ್ಯೂ ರೋಗದ ತೀವ್ರತೆ ಕಡಿಮೆ ಇದ್ದು, ಬೆಂಗಳೂರಿನಿಂದ ಪಾಸಿಟಿವ್ ಆಗಿ ಇಲ್ಲಿಗೆ ಬಂದು ಅಡ್ಮೀಟ್ ಆದವರಲ್ಲಿ ತೀವ್ರತೆ ಹೆಚ್ಚಾಗಿದೆ. ಆದ್ರೆ ಇಲ್ಲೀವರಗೆ ನಮ್ಮಲ್ಲಿ ಡೆಂಗ್ಯೂ ಸಾವಿನ ಪ್ರಕರಣ ಕಂಡುಬಂದಿಲ್ಲ ಎಂದು ಅವ್ರು ಸ್ಪಷ್ಟನೆ ನೀಡಿದ್ರು. 

ಇನ್ನು ಪುತ್ತೂರು ತಾಲೂಕಿನಲ್ಲಿ ಖಚಿತವಾದ 7 ಡೆಂಗ್ಯೂ ಪ್ರಕರಣಗಳು ಇವೆ. ಉಳಿದಂತೆ ವೈರಲ್ ಫೀವರ್ ಗೆ ಸಂಬಂಧಪಟ್ಟಿವೆ. ಸದ್ಯ ಜ್ವರಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನ ರೋಗಿಯ ರಕ್ತದ ಮಾದರಿಯನ್ನ ತೆಗೆದು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಅಲ್ಲಿ ಖಚಿತವಾದ ನಂತರ ಡೆಂಗ್ಯೂಗೆ ಸಂಬಂಧಿಸಿದ ಚಿಕಿತ್ಸೆಯನ್ನ ನೀಡಲಾಗುತ್ತದೆ. ಸದ್ಯ ಪುತ್ತೂರಿನ ನಗರ ಪ್ರದೇಶಗಳಲ್ಲಿ ಅತೀ ಹೆಚ್ಚು ಡೆಂಗ್ಯೂ ಪ್ರಕರಣಗಳು ಪತ್ತೆಯಾಗುತ್ತಿವೆ. ನಗರ ಪ್ರದೇಶಗಳಲ್ಲಿ ಅನೇಕ ಕಡೆ ಕಟ್ಟಡ ಕಾಮಗಾರಿ, ರಸ್ತೆಯ ಚರಂಡಿ ಕಾಮಗಾರಿ ಹೀಗೆ ಹಲವಾರು ಕೆಲಸ ಕಾರ್ಯಗಳು ನಡೀತಾ ಇವೆ. ಹೀಗಿರುವಾಗ ಕಟ್ಟಡ, ರಸ್ತೆ ಕಾಮಗಾರಿಯ ಕೆಲವು ಸ್ಲ್ಯಾಬ್ ಗಳಲ್ಲಿ ನೀರು ಶೇಖರಣೆಯಾಗುತ್ತದೆ. ಇದರಿಂದಾಗಿ ಅದರಲ್ಲಿ ಡೆಂಗ್ಯೂ ಸೊಳ್ಳೆಗಳು ಉತ್ಪತ್ತಿಯಾಗಿ ಮನುಷ್ಯನ ಮೇಲೆ ಪ್ರಭಾವ ಬೀರುತ್ತಿವೆ ಎಂದರು. 

ಉಳಿದಂತೆ ಉಪ್ಪಿನಂಗಡಿ ನಗರ ಭಾಗಗಳಲ್ಲೂ 35 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ಜನರು ಆದಷ್ಟು ಮನೆ ಪಕ್ಕ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಈಗಾಗ್ಲೇ ನಾವು ಬೇರೆ ಬೇರೆ ಫೀಲ್ಡ್ ಆಫೀಸರ್ಸ್ ಗಳನ್ನ ನೇಮಿಸಿ ಮಾಹಿತಿ ಕೊಡುವಂತ ಕೆಲಸ ಆರಂಭಿಸಿದ್ದೇವೆ. ಈ ಮೂಲಕ ಡೆಂಗ್ಯೂ ಜ್ವರವನ್ನ ಆದಷ್ಟು ನಮ್ಮ ನಮ್ಮ ಕೇಂದ್ರಗಳಲ್ಲಿ ನಿಯಂತ್ರಣಕ್ಕೆ ತರಲು ಪ್ರಯತ್ನ ಮಾಡ್ತಾ ಇದ್ದೇವೆ ಎಂದು ಮಾಹಿತಿ ನೀಡಿದರು.

Ads on article

Advertise in articles 1

advertising articles 2

Advertise under the article