-->
ಭೂಸ್ವಾಧೀನವಾಗದೆ ಮುಡಾ ಲೇಔಟ್ ಕಟ್ಟಲಾಗಿದೆ: ದಿನೇಶ್ ಗುಂಡೂರಾವ್

ಭೂಸ್ವಾಧೀನವಾಗದೆ ಮುಡಾ ಲೇಔಟ್ ಕಟ್ಟಲಾಗಿದೆ: ದಿನೇಶ್ ಗುಂಡೂರಾವ್



ಮಂಗಳೂರು: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹೆಸರು ವಿಚಾರವಾಗಿ ಮಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಪೊನ್ನಣ್ಣ ಅವರೇ ಸಿಎಂ ತಪ್ಪಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಭೂಸ್ವಾಧೀನ ಆಗದ ಸ್ಥಳದಲ್ಲಿ ಲೇಔಟ್ ಕಟ್ಟಲಾಗಿದೆ‌. ಬಿಜೆಪಿ ಸರ್ಕಾರದ ಅವಧಿಯಲ್ಲೇ ಇದು ಅಗಿರೋದು ಎಂದರು.

ಸಿಎಂ ಆದ ತಕ್ಷಣ ಅವರು ಅವರ ಜಾಗ ಬಿಟ್ಟು ಕೊಡಬೇಕಾ?. ನಿಮ್ಮ ಜಾಗ ಯಾರಾದ್ರೂ ಅತಿಕ್ರಮಣ ಮಾಡಿದ್ರೆ ಬಿಡ್ತೀರಾ?. ಅದು ಅವರ ಪತ್ನಿಯ ಜಾಗ, ಮೂಡಾ ಕೂಡ ತಪ್ಪೊಪ್ಪಿಕೊಂಡಿದೆ. ಹಾಗೆ ನೋಡಿದ್ರೆ ಸಿಎಂ ಕೋರ್ಟ್‌ಗೆ ಹೋಗಿ ಜಾಗ ವಾಪಾಸ್ ಕೇಳಬೇಕಿತ್ತು. ಆದರೂ ಅವರು ಬದಲಿ ಜಾಗ ಒಪ್ಪಿಕೊಂಡಿದ್ದಾರೆ.‌ಇದರಲ್ಲಿ ಭ್ರಷ್ಟಾಚಾರ ಎಲ್ಲಿ ಬರುತ್ತೆ ಎಂದರು.

ಬಿಜೆಪಿಯವರ ಕಥೆಗಳನ್ನು ತೆಗೆದ್ರೆ ಗೊತ್ತಾಗುತ್ತೆ, ಎಲ್ಲಾ ಅವರ ಅವಧಿಯಲ್ಲೇ ಅಗಿರೋದು. ಅವರು ಮಾಡಿದ್ದ 50:50ಯನ್ನು ನಮ್ಮ ಸರ್ಕಾರವೇ ಕ್ಯಾನ್ಸಲ್ ಮಾಡಿದ್ದು ಎಂದು ದಿನೇಶ್ ಗುಂಡೂರಾವ್ ಹೇಳಿದರು.

Ads on article

Advertise in articles 1

advertising articles 2

Advertise under the article