ಸುನೀಲ್ ಕುಮಾರ್ ರನ್ನು ರಾಜಕೀಯವಾಗಿ ಮುಗಿಸಲು ಹೇಗಿದೆ ಮಾಸ್ಟರ್ ಪ್ಲಾನ್!?
ಉಡುಪಿ: ಕಾರ್ಕಳ ಪಾಲಿಟಿಕ್ಸ್ ನಲ್ಲಿ ಕೇಳಿ ಬರುವ ಪವರ್ ಫುಲ್ ಹೆಸರುಗಳಲ್ಲಿ ಮಾಜಿ ಸಚಿವ, ಹಾಲಿ ಶಾಸಕ ಸುನೀಲ್ ಕುಮಾರ್ ಹೆಸರು ಪ್ರಮುಖವಾದ್ದು. ಕಾರ್ಕಳದ ಅಭಿವೃದ್ಧಿಯಲ್ಲಿ ಸುನೀಲ್ ಕುಮಾರ್ ರನ್ನು ಪಕ್ಕಕ್ಕಿಟ್ಟು ಇತರ ಹೆಸರನ್ನು ಹೇಳಲು ಸಾಧ್ಯವಿಲ್ಲ.. ಇದು ಕಾರ್ಕಳದ ಜನತೆಗೂ ಗೊತ್ತಿರೋ ವಿಚಾರ. ಆದ್ರೆ ಇಲ್ಲಿಯ ಬಿಜೆಪಿಯಲ್ಲೇ ಬಿಜೆಪಿಯನ್ನು ಮುಗಿಸುವ ಅದರಲ್ಲೂ ಸುನೀಲ್ ಕುಮಾರ್ ನ್ನು ರಾಜಕೀಯವಾಗಿ ಮಕಾಡೆ ಮಲಗಿಸಿ ಬಿಡುವ ಗೇಮ್ ಪ್ಲಾನ್ ನಡೀತಿದೆ. ಆ ಶಕುನಿ ಪಾತ್ರವನ್ನು ನಿಭಾಯಿಸುವ ವ್ಯಕ್ತಿ ಬೇರಾರೂ ಅಲ್ಲ ಬಿಜೆಪಿಯಲ್ಲೆ ಇರುವ ಬಜಗೋಳಿ ರವೀಂದ್ರ ಶೆಟ್ಟಿ, ಈ ರವೀಂದ್ರ ಶೆಟ್ಟಿ ಜೊತೆ ಕೈ ಜೋಡಿಸಿರೋ ವ್ಯಕ್ತಿಯೇ ಬೋಳದ ಗೇರುಬೀಜ.
ಯೆಸ್ ಇವರಿಬ್ಬರು ಸೇರ್ಕೊಂಡು ಸುನೀಲ್ ಕುಮಾರ್ ರನ್ನು ಮುಗಿಸುವ ರಣತಂತ್ರ ಹೆಣೆದಿರೋದು, ಇವರಿಬ್ಬರ ಪಾತ್ರಕ್ಕೆ ಎಲ್ಲಾ ಕಡೆ ಗಾಡ್ ಫಾದರ್ ಆಗಿ ಇರೋ ವ್ಯಕ್ತಿಯೇ ಮುನಿಯಾಲ ಉದಯಕುಮಾರ್ ಶೆಟ್ಟಿ. ಒಳಗೊಳಗೆ ಮುನಿಯಾಲ ಜೊತೆ ಒಪ್ಪಂದ ಮಾಡಿಕೊಂಡು, ಮುಂದಿನ ಚುನಾವಣೆಯಲ್ಲಿ ಸುನೀಲ್ ಕುಮಾರ್ ಗೆ ಸೀಟು ಸಿಗದಂತೆ ಮಾಡುವ ಷಡ್ಯಂತ್ರ ಮಾಡಲಾಗಿದ್ಯಂತೆ!
ಅಷ್ಟಕ್ಕೂ, ಪರಶುರಾಮನ ಮೂರ್ತಿ ವಿಚಾರದಲ್ಲಿ ಸುನೀಲ್ ಕುಮಾರ್ ರ ರಾಜಕೀಯ ಭವಿಷ್ಯವೇ ಮುಗಿದುಬಿಡುತ್ತೆ ಅಂತ ಪ್ರತಿಯೊಬ್ಬರೂ ಭಾವಿಸಿದ್ದಿರಬಹುದು, ವಿಗ್ರಹದ ವಿಚಾರದಲ್ಲಿ ಮುನಿಯಾಲು ಬಿಟ್ಟರೆ ಮತ್ಯಾರು ಸುನೀಲ್ ಕುಮಾರ್ ವಿರುದ್ಧ ಹೋರಾಟ ನಡೆಸಲು ಕೈ ಜೋಡಿಸಿರಲಿಲ್ಲ. ಯಾಕಂದ್ರೆ ಸತ್ಯಾಸತ್ಯತೆ ಪ್ರತಿಯೊಬ್ಬರಿಗೂ ಅರ್ಥವಾಗಿತ್ತು.
ಅಂದಹಾಗೆ ಬಿಜೆಪಿ ಅಧಿಕಾರವಿದ್ದ ಸಂದರ್ಭದಲ್ಲಿ ಕಾರ್ಕಳದಲ್ಲಿ ಗುತ್ತಿಗೆ ಕಾಮಗಾರಿಗಳನ್ನು ಸುನೀಲ್ ಕುಮಾರ್ ಜೊತೆಗಿದ್ದು ಪಡೆದುಕೊಂಡ ವ್ಯಕ್ತಿಯೇ ಈ ಮುನಿಯಾಲ ಉದಯ್ ಕುಮಾರ್ ಶೆಟ್ಟಿ. ಆಗ 40% ಆರೋಪ ಬಿಜೆಪಿ ಸರ್ಕಾರಕ್ಕೆ ಬಂದಾಗ, ಇದೇ ಮುನಿಯಾಲು ಪತ್ರಿಕಾಗೋಷ್ಠಿ ಕರೆದು ಭ್ರಷ್ಟಾಚಾರ ನಡೆದೇ ಇಲ್ಲ ಎಂದು ಹೇಳಿದ್ದರು. ಪರೋಕ್ಷವಾಗಿ ಸುನೀಲ್ ಕುಮಾರ್ ಭ್ರಷ್ಟಾಚಾರ ರಹಿತ ನಾಯಕ ಅನ್ನೋದನ್ನು ಒಪ್ಪಿ ಕೊಂಡಿದ್ದರು. ಇದು ರಾಜಕೀಯ ವಲಯದಲ್ಲಿ ಮುನಿಯಾಲ ಬಿಜೆಪಿಗೆ ಸೇರ್ತಾರಾ ಅನ್ನುವ ಚರ್ಚೆಯನ್ನು ಹುಟ್ಟುಹಾಕಿತ್ತು?
ಹಾಗಾಗಿಲ್ಲ, ಅದರ ಬದಲಾಗಿ ಕಾಂಗ್ರೆಸ್ ನ ಮಂಜುನಾಥ್ ಪೂಜಾರಿಗೆ ಸಿಗಬೇಕಾಗಿದ್ದ ಸೀಟು ತಪ್ಪಿಸಿ, ತಾವೇ ಕೈ ಜೊತೆ ಕೈ ಕುಲುಕಿಸಿ ಅಭ್ಯರ್ಥಿಯಾಗಿದ್ದರು. ಸುನೀಲ್ ಕುಮಾರ್ ವಿರುದ್ಧ ಅಪಪ್ರಚಾರ ಮಾಡಿ ಹಿಂದುತ್ವಕ್ಕಾಗಿ ಕೆಲಸ ಮಾಡ್ತಿದ್ದ ಪ್ರಮೋದ್ ಮುತಾಲಿಕ್ ಅವರಿಗೆ ಕಪ್ಪ ಕಾಣಿಕೆ ನೀಡಿ, ತಮ್ಮ ಶಿಷ್ಯ ಸುನಿಲ್ ಕುಮಾರ್ ವಿರುದ್ಧ ಎತ್ತಿಕಟ್ಟಿದ್ದರು. ಹಾಗೆಯೇ ಭ್ರಷ್ಟಚಾರದ ನಾನಾ ಆರೋಪಗಳನ್ನು ಸುನೀಲ್ ಕುಮಾರ್ ವಿರುದ್ಧ ಮಾಡಿದರು, ಏನೇ ಮಾಡಿದರು ಕಾರ್ಕಳದ ಪ್ರಭುದ್ಧ ಮತದಾರರು ಮುನಿಯಾಲ ಉದಯಕುಮಾರ್ ಶೆಟ್ಟಿ ಕೈಹಿಡಿಯಲಿಲ್ಲ.ಕಾರ್ಕಳದ ಅಭಿವೃದ್ಧಿಗೆ ವಜ್ರ ಮುಕುಟದಂತಿದ್ದ ಸುನೀಲ್ ಕುಮಾರ್ ರನ್ನೇ ಆಯ್ಕೆ ಮಾಡಿದ್ರು. ಈ ಅವಮಾನದಿಂದ ಹೊರಬಾರದ ಮುನಿಯಾಲ, ಸುನೀಲ್ ಕುಮಾರ್ ವಿರುದ್ಧ ನಿರಂತರ ಆಪಾದನೆಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಯಾರ ಕಾಮಗಾರಿ ಹೇಗಿದೆ ಎಂದು ನೋಡುವುದಕ್ಕೆ ಹೋದರೆ ಕಳಪೆ ಕಾಮಗಾರಿಗಳಲ್ಲಿ ಮುನಿಯಾಲರ ಹೆಸರು ನಂಬರ್ ವನ್ ಸ್ಥಾನದಲ್ಲಿ ರಾರಾಜಿಸುತ್ತಿದೆ. ಇಂಥ ಕಳಪೆ ಕಾಮಗಾರಿಗಳ ರೂವಾರಿ ಮುನಿಯಾಲ ಬಿಜೆಪಿಯಲ್ಲಿರೋ ಶಕುನಿಗಳನ್ನು ಹಿಡಿದುಕೊಂಡು ಸುನೀಲ್ ಕುಮಾರ್ ವಿರುದ್ಧವೇ ಆರೋಪದ ಮೇಲೆ ಆರೋಪ ಮಾಡುವಂತೆ ಮಾಡ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷವಾಗ್ತಾ ಬಂದ್ರೂ ಸುನೀಲ್ ಕುಮಾರ್ ವಿರುದ್ಧ ತನಿಖೆ ಮಾಡಿಲ್ಲ. ತಾಕತ್ತಿದ್ದರೆ ತನಿಖೆ ಮಾಡಿ, ನನ್ನ ತಪ್ಪಾಗಿದ್ದರೆ ಬಂಧಿಸಿ ಎಂದು ಸುನೀಲ್ ಕುಮಾರ್ ಚಾಲೆಂಜ್ ಹಾಕಿದ್ದರೂ ಕೂಡ ಆ ಚಾಲೆಂಜ್ ನ್ನು ಸ್ವೀಕರಿಸಲು ಮುನಿಯಾಲ ಸಿದ್ದವಿಲ್ಲ.!
ಸರ್ಕಾರದ ಅಧಿಕಾರಿಗಳು ಮಾಡಿದ ತಪ್ಪು, ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬಂದದ್ದು, ಕಾಮಗಾರಿಗೆ ಸರ್ಕಾರದ ಹಣ ಬಾರದದಂತೆ ತಡೆಹಿಡಿದಿರುವ ಕಾರಣ ಪರಶುರಾಮನ ಕೆಲಸ ನಿಂತಿದೆ. ಇದರಲ್ಲಿ ಸುನೀಲ್ ಕುಮಾರ್ ಪಾತ್ರವಿಲ್ಲ ಎಂಬುದು ಕ್ಷೇತ್ರದ ಜನರಿಗೂ ಅರಿವಾಗಿದೆ. ಮುನಿಯಾಲ ಉದಯಕುಮಾರ್ ಶೆಟ್ಟಿ ರಾಜಕೀಯವಾಗಿ ಎಷ್ಟೇ ಆಟವಾಡಿದ್ರೂ ಅದು ನೀರ ಮೇಲಿಟ್ಟ ಹೋಮದಂತಾಗಿದೆ.
ಸದ್ಯ, ಮುನಿಯಾಲರ ಮುಖವಾಡ ಒಂದೊಂದಾಗಿ ಬಯಲಾಗ್ತಿದೆ. ಮುಂದಿನ ಚುನಾವಣೆಯಲ್ಲಿ ಮುನಿಯಾಲ ಚುನಾವಣ ಕಣಕ್ಕೆ ಇಳಿದಿದ್ದೆ ಆಗಿದ್ದಲ್ಲಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸೋ ಲೆಕ್ಕಾಚಾರ ಹಿಂದುತ್ವದ ಭದ್ರಕೋಟೆಯಲ್ಲಿ ಆಗ್ತಿದೆ.