.jpeg)
ಪುತ್ತೂರಿನಲ್ಲಿ ಭಾರೀ ಭೂಕುಸಿತ!!
Friday, July 19, 2024
ಪುತ್ತೂರು: ಉತ್ತರ ಕನ್ನಡ ಅಂಕೋಲದಲ್ಲಿ ನಡೆದ ಭೂಕುಸಿತದ ಮಾದರಿಯಲ್ಲೇ ಪುತ್ತೂರಿನ ಆರ್ಯಾಪು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಕ್ರೆಜಾಲ್ ನಲ್ಲೊಂದು ಘಟನೆ ಇಂದು ನಡೆದಿದೆ.
ಮಚ್ಚಿಮಲೆ-ಬಲ್ನಾಡು ಸಂಪರ್ಕಿಸುವ ಮಾರ್ಗ ಮಧ್ಯೆ ಈ ಭೂಕುಸಿತ ಉಂಟಾಗಿದ್ದು, ಕಾಂಕ್ರಿಟ್ ರಸ್ತೆಯ ಪಕ್ಕದಿಂದಲೇ ಭೂಕುಸಿತ ಉಂಟಾಗಿದೆ. ಸುಮಾರು 40 ಅಡಿ ಎತ್ತರದಿಂದ ಮಣ್ಣು ಮರಗಳೆಲ್ಲ ಇಳಿಜಾರಿಗೆ ಬಿದ್ದಿದೆ. ಅಕ್ಕಪಕ್ಕದಲ್ಲಿ ಯಾವುದೇ ಮನೆಗಳು ಇಲ್ಲದಿರುವುದರಿಂದ ಅಪಾಯ ತಪ್ಪಿದೆ. 100 ಮೀಟರ್ ಅಂತರದಲ್ಲಿ ಒಂದು ಮನೆ ಇರುವುದು ಬಿಟ್ಟರೆ, ಬೇರೆ ಯಾವುದೇ ಅಪಾಯದ ಭೀತಿ ಇಲ್ಲ. ಸದ್ಯ ಘಟನಾ ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿದ್ದಾರೆ.