ತಲೆಮರೆಸಿಕೊಂಡಿರುವ ಆಪತ್ಬಾಂಧವ ಆಸಿಫ್ ಫೇಸ್ಬುಕ್‌ನಲ್ಲಿ ಆ್ಯಕ್ಟಿವ್?
ಉಡುಪಿ: ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ಮತ್ತು ವೀಡಿಯೋ ವೈರಲ್ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಅಪತ್ಬಾಂಧವ ಆಸಿಫ್ ಫೇಸ್ಬುಕ್‌ನಲ್ಲಿ ಆ್ಯಕ್ಟಿವ್ ಇರುವುದು ಗೊತ್ತಾಗಿದೆ. ʼದಿ ನ್ಯೂಸ್ ಅವರ್ʼ ಆಪತ್ಬಾಂಧವ ಆಸಿಫ್ ಹೆಸರಿನಲ್ಲಿರುವ ಖಾತೆ ಆಕ್ಟಿವ್ ಇರುವುದನ್ನ ಪತ್ತೆಹಚ್ಚಿದೆ. ಇಷ್ಟಾದ್ರೂ ಪಡುಬಿದ್ರಿ ಪೊಲೀಸರಿಗೆ ಸಿಕ್ಕಿಲ್ಲ ಅನ್ನೋದು ಇದೀಗ ಸೋಜಿಗದ ಸಂಗತಿ ಎನಿಸುವಂತಿದೆ.
ʼಆಪತ್ಬಾಂಧವ ಆಸಿಫ್ʼ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಆಸಿಫ್ ಈ ಹಿಂದೆ ಮಾಡಿದ ಸಾಮಾಜಿಕ ಕಾರ್ಯಗಳನ್ನು ಮರುಹಂಚಿಕೊಂಡಿದ್ದಾನೆ. ಎರಡು ಗಂಟೆಗಳ ಹಿಂದೆ ಈ ಪೋಸ್ಟ್‌ಗಳನ್ನ ಆತ ಮರು ಪೋಸ್ಟ್ ಮಾಡಿರುವುದು ಗೊತ್ತಾಗಿದೆ. ಈಗಾಗಲೇ ಪ್ರಕರಣ ದಾಖಲಾಗಿ 4 ದಿನಗಳಾದ್ರೂ ಆತನ ಪತ್ತೆ ಹಚ್ಚುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ನಡುವೆ ಆಪತ್ಬಾಂಧವ ಆಸಿಫ್ ಹೆಸರಿನ ಆತನೇ ನಿರ್ವಹಿಸುತ್ತಿದ್ದ ಎನ್ನಲಾದ ಖಾತೆ ಆಕ್ಟಿವ್ ಆಗಿರುವುದು ಪೊಲೀಸರ ಕಾರ್ಯವೈಖರಿಯನ್ನು ಪ್ರಶ್ನಿಸುವಂತಿದೆ. ಜೊತೆಗೆ ಆತನ 6 ವರ್ಷದ ಮಗುವನ್ನು ಪತ್ನಿ ಬಳಿಯಿಂದ ಬಲವಂತವಾಗಿ ಕರೆದೊಯ್ದಿದ್ದಾನೆ ಎಂದು ಆಸಿಫ್ ಪತ್ನಿ ಶಬನಮ್ ಈಗಾಗಲೇ ದೂರಿದ್ದಾರೆ.