ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ್ ಬಪ್ಪಳಿಗೆ ನಿಧನ
Wednesday, July 10, 2024
ಪುತ್ತೂರು: ಅಪ್ಪಟ ಕಾಂಗ್ರೆಸ್ ಕಾರ್ಯಕರ್ತ ಚಂದ್ರಶೇಖರ್ ಬಪ್ಪಳಿಗೆ ಹಠತ್ತನೇ ಅನಾರೋಗ್ಯಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಖ್ಯಾತ ಕ್ರಿಕೆಟ್ ಪಟುವಾಗಿಯೂ ಗುರಿತಿಸಿಕೊಂಡಿದ್ದ ಇವರು, ನೆನ್ನೆ ದಿನ ಅಸೌಖ್ಯಕ್ಕೊಳಗಾಗಿದ್ದರು. ಬಳಿಕ ಪುತ್ತೂರಿನ ಸರ್ಕಾರಿ ಆಸ್ಪತ್ರೆ ದಾಖಲು ಮಾಡಲಾಗಿತ್ತು. ಆದ್ರೆ ತೀವ್ರ ಅಸೌಖ್ಯಗೊಂಡಿದ್ದರಿಂದ ಅವರನ್ನ ಮಂಗಳೂರಿನ ವೆನ್ಲಾಕ್ ಗೆ ದಾಖಲು ಮಾಡಲಾಗಿತ್ತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ.
ಮೃತರು ಪತ್ನಿ, ತಂದೆ ಹಾಗೂ ಇಬ್ಬರು ಸಹೋದರರನ್ನ ಅಗಲಿದ್ದಾರೆ. ಪುತ್ತೂರು ನಗರ ಯುವ ಕಾಂಗ್ರೆಸ್ ಅಧ್ಯಕ್ಷ ಮೋನು ಬಪ್ಪಳಿಗೆ ಕಂಬನಿ ಮಿಡಿದಿದ್ದಾರೆ.