ತುಂಬಿ ಹರಿಯುತ್ತಿರುವ ಕುಮಾರಧಾರ ನದಿಯಲ್ಲಿ ಸಿಲುಕಿದ ಬೆಂಗಳೂರಿನ ವ್ಯಕ್ತಿ...
Monday, July 8, 2024
ಕಡಬ: ವ್ಯಕ್ತಿಯೊಬ್ರು ಕುಮಾರಧಾರ ನದಿಗೆ ಇಳಿದು ಸಿಲುಕಿದ ಘಟನೆ ಕಡಬ ತಾಲೂಕಿನ ಪುಳಿಕುಕ್ಕು ಎಂಬಲ್ಲಿ ನಡೆದಿದೆ. ಬೆಂಗಳೂರು ಮೂಲದ ರವಿಕುಮಾರ್ ಸಾವಿನಿಂದ ಪಾರಾದವರು ಎಂದು ತಿಳಿದುಬಂದಿದೆ.
ಕುಮಾರಧಾರ ನದಿಗೆ ಇಳಿದಿದ್ದ ರವಿಕುಮಾರ್ ಆಯತಪ್ಪಿ ನದಿಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಬಳಿಕ ಅಗ್ನಿಶಾಮಕ ದಳ ಮತ್ತು ಸ್ಥಳೀಯ ಶೌರ್ಯ ತಂಡದಿಂದ ರವಿಕುಮಾರ್ ಅವರನ್ನ ರಕ್ಷಣೆ ಮಾಡಲಾಗಿದೆ.
ಸದ್ಯ ಇದೀಗ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತುಂಬಿ ಹರಿಯುತ್ತಿರುವ ಕುಮಾರಧಾರ ನದಿಗೆ ರವಿಕುಮಾರ್ ಅವ್ರು ಇಳಿದಿದ್ದಾರೂ ಯಾಕೆ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ. ಒಂದು ವೇಳೆ ಆತ್ಮಹತ್ಯೆಗೆ ಪ್ರಯತ್ನಿಸಿ ನದಿಯ ಪೊದೆಯಲ್ಲಿ ಸಿಲುಕಿ ಹಾಕಿಕೊಂಡ್ರ ಎಂಬುದು ಪ್ರಶ್ನೆಯಾಗಿದೆ.

