ಮಂಗಳೂರು| ಅಪಘಾತ ಗಾಯಾಳು ಆಸ್ಪತ್ರೆ ಸಾಗಿಸಿ ಮಾನವೀಯತೆ ಮೆರೆದ ಬಿಜೆಪಿ ನಾಯಕಿ
Wednesday, May 3, 2023
ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಮುಗಿಸಿ ವಾಪಸ್ ಹೋಗುತ್ತಿದ್ದ ವೇಳೆ ಅಪಘಾತ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಬಿಜೆಪಿ ನಾಯಕಿ ಮಾನವೀಯತೆ ಮೆರೆದ ಘಟನೆ ನಡೆದಿದೆ.
ಮುಲ್ಕಿಯಿಂದ ಉಡುಪಿಗೆ ತೆರಳುತ್ತಿದ್ದಾಗ ಬಪ್ಪನಾಡಿನಲ್ಲಿ ರಸ್ತೆ ಅಪಘಾತಕ್ಕೊಳಗಾಗಿ ಸಮೀರ್ ಎಂಬ ಯುವಕ ಗಾಯಗೊಂಡಿದ್ದನು. ಇದನ್ನು ಗಮನಿಸಿದ ಉಡುಪಿ ಜಿಲ್ಲೆಯ ಬಿಜೆಪಿ ನಾಯಕಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಗೀತಾಂಜಲಿ ಸುವರ್ಣ ಅವರು ತಕ್ಷಣವೇ ಆ್ಯಂಬುಲೆನ್ಸ್ ಕರೆಸಿ ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲು ನೆರವಾದರು. ಅಲ್ಲದೇ, ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಯುವಕನ ಮನೆಯವರು ಅಲ್ಲಿಗೆ ಭೇಟಿ ನೀಡುವ ತನಕ ಆಸ್ಪತ್ರೆಯಲ್ಲಿದ್ದು, ಕುಟುಂಬಿಕರು ಆಗಮಿಸಿದ ಬಳಿಕ ಧೈರ್ಯ ತುಂಬಿ ಮಾನವೀಯತೆ ಮೆರೆದರು.