ಬೆಳ್ತಂಗಡಿ: ಹರೀಶ್ ಪೂಂಜಾ ಅವರಿಂದ ಮುಸ್ಲಿಮರಿಗೆ ʼಅಜ್ಮೀರ್ ಪ್ರವಾಸʼದ ಆಫರ್!?
ಬೆಳ್ತಂಗಡಿ:
ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಬಿರುಸಿನ ಮತ ಪ್ರಚಾರ ಆರಂಭಗೊಂಡಿದೆ. ಬೆಳ್ತಂಗಡಿ
ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮಣಿಸಲು ಅವರ ವೋಟ್ ಬ್ಯಾಂಕ್
ಅನ್ನೇ ಅಲುಗಾಡಿಸಲು ಹಾಲಿ ಶಾಸಕ, ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ ಹೊಸ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ಹಿಂದೂ ಕಾರ್ಯಕರ್ತರೇ ಸೋಶಿಯಲ್ ಮೀಡಿಯಾಗಳಲ್ಲಿ ಬಿಸಿ ಬಿಸಿ ಚರ್ಚೆ ಆರಂಭಿಸಿದ್ದಾರೆ.
ಚುನಾವಣೆ ಮೇ
10 ರಂದು ನಡೆಯಲಿದ್ದು, ಇದಕ್ಕೂ ಮುನ್ನ ಮೇ 8 ರಂದು ಕ್ಷೇತ್ರದಲ್ಲಿರುವ ಮುಸ್ಲಿಂ ಬಾಂಧವರಿಗೆ ಅಜ್ಮೀರ್
ಪ್ರವಾಸದ ಆಸೆ ಹುಟ್ಟಿಸಿದ್ದಾರೆ. ಜೊತೆಗೆ, ಅಜ್ಮೀರ್ ಪ್ರವಾಸಕ್ಕೆ ತೆರಳುವ ಮುಸ್ಲಿಮರಿಗೆ ರೈಲು
ಟಿಕೆಟ್ ಮಾತ್ರವಲ್ಲದೆ, ಹೆಚ್ಚುವರಿ ಹಣ ನೀಡುತ್ತಾರೆ ಅನ್ನೋ ಚರ್ಚೆ ಕೇಳಿ ಬರುತ್ತಿದೆ. ಅಜ್ಮೀರ್
ಗೆ ತೆರಳಿ ವಾಪಸ್ ಬರಬೇಕಿದ್ದರೆ ಕನಿಷ್ಠ ಒಂದು ವಾರ ಬೇಕಾಗುವುದು. ಈ ಮೂಲಕ ಬಿಜೆಪಿಗೆ ವೋಟ್ ಹಾಕದಿರುವ
ಮುಸ್ಲಿಮರನ್ನು ಅಜ್ಮೀರ್ ಪ್ರವಾಸದ ಮೂಲಕ ಮತದಾನದಿಂದ ದೂರವುಳಿಸುವ ಪ್ರಯತ್ನವನ್ನು ಹರೀಶ್ ಪೂಂಜಾ
ನಡೆಸುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿದೆ.
ರೈಲು ಇರುವುದು ಕನ್ಫರ್ಮ್ !
ಅಜ್ಮೀರ್
ಗೆ ಹೆಚ್ಚಿನ ಸಂಖ್ಯೆಯಲ್ಲಿ ಕೇರಳ ಯಾತ್ರಿಕರು ತೆರಳುತ್ತಾರೆ. ವಾರದಲ್ಲಿ ಒಂದು ಬಾರಿ ಅಜ್ಮೀರ್ ಗೆ
ತೆರಳುವ ಕೇರಳ-ಅಜ್ಮೀರ್ ನಡುವೆ ಓಡಾಟ ನಡೆಸುವ ಮರುಸಾಗರ್ ಎಕ್ಸ್ ಪ್ರೆಸ್ ಇರುವುದನ್ನು ಆನ್
ಲೈನ್ ಬುಕ್ಕಿಂಗ್ ಮೂಲಕ ʼದಿ ನ್ಯೂಸ್ ಅವರ್ʼ ಖಚಿತಪಡಿಸಿಕೊಂಡಿದೆ. ಮೇ 8 ಕ್ಕೆ ತೆರಳುವ ಈ ರೈಲು
ಮರುದಿನ ಸಾಯಂಕಾಲ ಅಜ್ಮೀರ್ ತಲುಪುತ್ತದೆ. ಇನ್ನು ವಾಪಸ್ ಬರಬೇಕಿದ್ದರೆ 12 ನೇ ತಾರೀಕಿನಂದು ಮರುಸಾಗರ್
ಎಕ್ಸ್ ಪ್ರೆಸ್ ರೈಲನ್ನೇ ಅವಲಂಬಿಸಬೇಕಾಗುತ್ತದೆ. ಸಾಮಾನ್ಯವಾಗಿ ಅಜ್ಮೀರ್ ಯಾತ್ರಿಕರು ಇದೇ ರೈಲನ್ನು
ಅವಲಂಬಿಸುತ್ತಾರೆ. ಈ ಮಧ್ಯೆ ಚುನಾವಣೆ ನಡೆದು ಹೋಗಲಿದ್ದು, ಹೀಗಾಗಿ ಮುಸ್ಲಿಮರನ್ನು ಅಜ್ಮೀರ್ ಪ್ರವಾಸದ
ಮೂಲಕ ಚುನಾವಣೆಯಿಂದ ದೂರವುಳಿಸುವ ಷಡ್ಯಂತ್ರ ನಿಜಕ್ಕೂ ನಡೆದಿದೆಯಾ ಅನ್ನೋದಕ್ಕೆ ಹರೀಶ್ ಪೂಂಜಾ ಅವರೇ
ಉತ್ತರಿಸಬೇಕಿದೆ.
ಒಂದು ವೇಳೆ ಈ ವಿಚಾರ ನಿಜವೇ ಆಗಿದ್ದಲ್ಲಿ, ಒಂದು ಸಮುದಾಯವನ್ನು ಮತದಾನದಿಂದ ದೂರವುಳಿಸುವ ಕುರಿತು ಚುನಾವಣಾ ಆಯೋಗವು ಕ್ರಮ ತೆಗೆದುಕೊಳ್ಳಲು ಅಧಿಕಾರ ಹೊಂದಿರುತ್ತದೆ ಅನ್ನೋದು ಗಮನಾರ್ಹ.