-->
ಮಂಗಳೂರು| ಶಾಸಕರ ರಾಜಕೀಯಕ್ಕೆ ಮಸೀದಿ ಮೈಕ್ ದುರ್ಬಳಕೆ!?; ಏನಿದು ಯುಟಿ ಖಾದರ್ ವಿವಾದ?

ಮಂಗಳೂರು| ಶಾಸಕರ ರಾಜಕೀಯಕ್ಕೆ ಮಸೀದಿ ಮೈಕ್ ದುರ್ಬಳಕೆ!?; ಏನಿದು ಯುಟಿ ಖಾದರ್ ವಿವಾದ?

 


ಮಂಗಳೂರು: ಮಸೀದಿಯ ಇಮಾಮರು ಬಳಸುವ ಮೈಕ್‌ ಅನ್ನ ಮಂಗಳೂರು ಶಾಸಕ ಯುಟಿ ಖಾದರ್‌ ದುರ್ಬಳಕೆ ಮಾಡಿಕೊಂಡಿದ್ದು, “ಇದು ನೀತಿ ಸಂಹಿತೆ ಉಲ್ಲಂಘನೆ ಆಗಲ್ವೇ ?”ಎಂದು ನೆಟ್ಟಿಗರು ಪ್ರಶ್ನೆ ಎತ್ತಿದ್ದಾರೆ. ಮಸೀದಿ ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿರುವ ಮೈಕ್‌ ಗಳಲ್ಲಿ ಯುಟಿ ಖಾದರ್‌ ಮಾತನಾಡಿರುವುದು ಎಷ್ಟು ಸರಿ ಎಂದು ಅವರ ವಿರೋಧಿ ಪಾಳಯದ ಪಕ್ಷದ ಕಾರ್ಯಕರ್ತರು ಚಕಾರ ಎತ್ತಿದ್ದಾರೆ. ಈ ಕುರಿತಂತೆ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿದೆ.

ಎಪ್ರಿಲ್‌ 10 ರಂದು ಶಾಸಕ ಯುಟಿ ಖಾದರ್‌ ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ ಅಭ್ಯರ್ಥಿ ಯುಟಿ ಖಾದರ್‌ ಅವರೇ ಖುದ್ದು ತಮ್ಮ ಅಧಿಕೃತ ಫೇಸ್ಬುಕ್‌ ಪೇಜ್‌ ನಲ್ಲಿ ಪೋಸ್ಟ್‌ ಮಾಡಿದ ಬಳಿಕ ಸುದ್ದಿ ವೈರಲ್‌ ಆಗಿದೆ. ಆ ಪೋಸ್ಟ್‌ ನಲ್ಲಿ ಖಾದರ್‌ ಅವರು, “ಮುನ್ನೂರು ಗ್ರಾಮದ ಕುತ್ತಾರು ಮದನಿ ನಗರದ ಮಸ್ಜಿದ್‌ ನಲ್ಲಿ ನಡೆದ ಇಫ್ತಾರ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ” ಎಂದು ಬರೆದುಕೊಂಡಿದ್ದಾರೆ.

ಆದರೆ, ಮಸೀದಿ ಒಳಗಡೆ ಇಮಾಮರು (ಧಾರ್ಮಿಕ ಗುರುಗಳು) ಬಳಸುವ ಮೈಕ್‌ ಅನ್ನ ಶಾಸಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ನಾಯಕನ ಪರ ನಿಂತಿದ್ದು, ಅಲ್ಲಿ ಯಾವುದೇ ರಾಜಕೀಯ ಭಾಷಣ ಮಾಡಲಾಗಿಲ್ಲ, ಬದಲಿಗೆ ರಂಝಾನ್‌ ಹಾಗೂ ಇಫ್ತಾರ್‌ ಕುರಿತ ಸಂದೇಶ ನೀಡಲಾಗಿತಷ್ಟೇ ಎಂದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಎಸ್ಡಿಪಿಐ ತೊರೆದು ರಾಜಕೀಯ ನಿವೃತ್ತಿ ಘೋಷಿಸಿದ್ದ ಅಶ್ರಫ್‌ ಕೆಸಿ ರೋಡ್‌, ಯುಟಿ ಖಾದರ್‌ ಪರವಾಗಿ ಟ್ವೀಟ್‌ ಮಾಡಿದ್ದಾರೆ. “ಯು.ಟಿ ಖಾದರ್ ಎಂದೂ ಧರ್ಮ ರಾಜಕಾರಣ ಮಾಡಿದವರಲ್ಲಮೊನ್ನೆ ಮದನಿ ನಗರದ ಮಸ್ಜಿದ್ ನಲ್ಲಿ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಅತಿಥಿಯಾಗಿದ್ದ ಯು.ಟಿ ಖಾದರ್ ಸೌಹಾರ್ದ ಇಫ್ತಾರ್ ಸಂದೇಶ ನೀಡಿದರುಅಲ್ಲಿ ರಾಜಕೀಯದ ಮಾತೇ ಇರಲಿಲ್ಲ.ಅತಿಥಿಯೊಬ್ಬರು ಇಫ್ತಾರ್ ಸೌಹಾರ್ದ ಸಂದೇಶ ನೀಡಿದ್ದೇ ತಪ್ಪು ಎಂದು ವಾದಿಸುವುದರ ಹಿಂದಿರುವ ಉದ್ದೇಶವೇನು?” ಎಂದು ಪ್ರಶ್ನಿಸಿದ್ದಾರೆ. ಇದನ್ನು ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಜಾಲತಾಣದ ಗೋಡೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಯುಟಿ ಖಾದರ್‌ ಆಧ್ಯಾತ್ಮ ಚಟುವಟಿಕೆಗೆ ಸೀಮಿತವಾದ ಮೈಕ್‌ ಅನ್ನು ಬಳಸಿದ್ದು ಸರಿಯೇ? ಅನ್ನೋ ಪ್ರಶ್ನೆಗೆ ಶಾಸಕರೇ ಉತ್ತರಿಸಬೇಕಿದೆ.   


Ads on article

Advertise in articles 1

advertising articles 2

Advertise under the article