ಪುತ್ತಿಲ ನಾಮಪತ್ರ ಸಲ್ಲಿಕೆಗೆ ಜನಸ್ತೋಮ; ಕೊನೆ ಕ್ಷಣದಲ್ಲಿ 7 ಬಾರಿ ಕರೆ ಮಾಡಿದ ಸಂತೋಷ್ ಜೀ!
ಪುತ್ತೂರು: ದಿನದಿಂದ ದಿನಕ್ಕೆ ರಂಗೇರುತ್ತಿರುವ ಪುತ್ತೂರು ಚುನಾವಣಾ
ಕಣದಿಂದ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಪಕ್ಷೇತರನಾಗಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಸಾವಿರಾರು ಕೇಸರಿ ಕಾರ್ಯಕರ್ತರ ಸಮ್ಮುಖದಲ್ಲಿ ಪುತ್ತಿಲ ಮಿನಿ ವಿಧಾನಸೌಧಕ್ಕೆ ತೆರಳಿ ತನ್ನ ನಾಮಪತ್ರ
ಸಲ್ಲಿಸಿದ್ದಾರೆ.
ಅರುಣ್ ಪುತ್ತಿಲ ಅವರ ಪಕ್ಷೇತರ ಸ್ಪರ್ಧೆ ಬಹುತೇಕ ಬಿಜೆಪಿಗೆ ಹಿನ್ನಡೆ ಆಗುವ ಸಾಧ್ಯತೆ ಮನಗಂಡಿರುವ ಸಂಘ ಪರಿವಾರ ಹಾಗೂ ಬಿಜೆಪಿ ವರಿಷ್ಠರು ನಾಮಪತ್ರ ಸಲ್ಲಿಕೆ ದಿನವೂ ಕೊನೆಯದಾಗಿ ಅರುಣ್ ಪುತ್ತಿಲ ಮನವೊಲಿಸುವ ಪ್ರಯತ್ನ ನಡೆಸಿದ್ಧಾರೆ ಎಂದು ತಿಳಿದು ಬಂದಿದೆ. ನಾಮಪತ್ರ ಸಲ್ಲಿಕೆಗೆ ಹೊರಡುತ್ತಿದ್ದಂತೆ ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಕೊನೆಯ ಪ್ರಯತ್ನ ಎಂಬಂತೆ ಕರೆ ಮಾಡಿದ್ದಾಗಿ ʼದಿ ನ್ಯೂಸ್ ಅವರ್ʼ ಗೆ ತಿಳಿದು ಬಂದಿದೆ.
ಬೆಳಿಗ್ಗೆ ಸತತ 7 ಬಾರಿ ಕರೆ ಮಾಡಿದರೂ, ಸಂತೋಷ್ ಜೀ ಅವರ ಕರೆ ಸ್ವೀಕರಿಸದಂತೆ
ಅರುಣ್ ಪುತ್ತಿಲ ಅವರಿಗೆ ಸ್ಥಳೀಯ ಹಿರಿಯರೊಬ್ಬರು ಮಾರ್ಗದರ್ಶನ ನೀಡಿದ್ದಾಗಿಯೂ, ಅದರಂತೆ ಅರುಣ್
ಪುತ್ತಿಲ, ಸಂತೋಷ್ ಜೀ ಕರೆ ನಿರ್ಲಕ್ಷಿಸಿದ್ದಾಗಿ ಗೊತ್ತಾಗಿದೆ.