ಇನ್ಮುಂದೆ ದೇವಾಲಯಗಳಲ್ಲಿ ಗಜರಾಜನ ಬಳಕೆ ನಿಷೇಧ; ಹೈಕೋರ್ಟ್ ಆದೇಶ!!
Saturday, March 4, 2023
ಮದ್ರಾಸ್: ತಮಿಳುನಾಡಿನ ಯಾವುದೇ ದೇವಾಲಯ, ಧಾರ್ಮಿಕ ಸಂಸ್ಥೆಗಳು ಅಥವಾ ಖಾಸಗಿ ವ್ಯಕ್ತಿಗಳು ಇನ್ನು ಮುಂದೆ ಆನೆಗಳನ್ನು ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಆದೇಶ ಹೊರಡಿಸಿದೆ.
ದೇವಸ್ಥಾನಗಳು ಮತ್ತು ಖಾಸಗಿ ವ್ಯಕ್ತಿಗಳ ಒಡೆತನದ ಆನೆಗಳು ಸೇರಿದಂತೆ ರಾಜ್ಯದ ಎಲ್ಲಾ ಬಂಧಿತ ಆನೆಗಳನ್ನು ಸರ್ಕಾರ ನಡೆಸುತ್ತಿರುವ ಪುನರ್ವಸತಿ ಶಿಬಿರಗಳಿಗೆ ಸ್ಥಳಾಂತರಿಸಲು ಸರ್ಕಾರಕ್ಕೆ ಕೋರ್ಟ್ ಸೂಚನೆ ನೀಡಿದೆ