-->
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ತಾಪಮಾನ: ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯ ನಿಗಾಕ್ಕೆ ಡಿಸಿ ಆದೇಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿದ ತಾಪಮಾನ: ಹಾಸ್ಟೆಲ್ ವಿದ್ಯಾರ್ಥಿಗಳ ಆರೋಗ್ಯ ನಿಗಾಕ್ಕೆ ಡಿಸಿ ಆದೇಶ


ಮಂಗಳೂರು: ತಾಪಮಾನ ಏರಿಕೆಯಿಂದಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಮ್ಮ ಅಧೀನಕ್ಕೊಳಪಟ್ಟ ವಿದ್ಯಾರ್ಥಿ ನಿಲಯಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಆರೋಗ್ಯದ ರಕ್ಷಣೆಯ ಹಿನ್ನೆಲೆಯಲ್ಲಿ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

1. ಎಲ್ಲಾ ವಿದ್ಯಾರ್ಥಿಗಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವುದು. ಆದಷ್ಟು ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ತಿಳಿಸಬೇಕು.

2. ವಿದ್ಯಾರ್ಥಿನಿಲಯಗಳ ಅಡಿಗೆ ಕೋಣೆಯನ್ನು ಮತ್ತು ಅಡುಗೆಗೆ ಬಳಸುವ ಪಾತ್ರೆ, ಪರಿಕರಗಳನ್ನು ಸ್ವಚ್ಛವಾಗಿಟ್ಟುಕೊಂಡಿರಬೇಕು.

3. ಅಡುಗೆ ತಯಾರಿಸುವವರು ಮತ್ತು ಆಹಾರ ಬಡಿಸುವವರು ಕೈಗಳ ಶುಚಿತ್ವ ಸೇರಿದಂತೆ ವೈಯಕ್ತಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು.

4. ಪ್ರತಿ 6 ತಿಂಗಳಿಗೊಮ್ಮೆ ಅಡುಗೆ ಕೋಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರ ಮತ್ತು ಆಹಾರ ತಯಾರಕರ ಆರೋಗ್ಯ ತಪಾಸಣೆಯನ್ನು ನಡೆಸಬೇಕು.

5. ವಿದ್ಯಾರ್ಥಿ ನಿಲಯಗಳಿಗೆ ವಿವಿಧ ಮೂಲಗಳಿಂದ ಸರಬರಾಜು ಆಗುವ ನೀರಿನ ಮಾದರಿಯನ್ನು ಪ್ರತೀ ತಿಂಗಳು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿ, ಕುಡಿಯಲು ಮತ್ತು ಅಡು ತಯಾರಿಕೆಗೆ ಸುರಕ್ಷಿತ ನೀರನ್ನು ಒದಗಿಸಲು ಅಗತ್ಯ ಕ್ರಮಕೈಗೊಳ್ಳಬೇಕು.

6. ವಿದ್ಯಾರ್ಥಿ ನಿಲಯಗಳ ಶೌಚಾಲಯ, ಸ್ನಾನದ ಕೋಣೆಯನ್ನು ಸ್ವಚ್ಚವಾಗಿಡಬೇಕು.

7. ಬೇಸಿಗೆ ಸಂದರ್ಭದಲ್ಲಿ ಆಹಾರ ಪದಾರ್ಥಗಳು ಬೇಗನೆ ಕೆಡುವ ಸಾಧ್ಯತೆ ಇರುವುದರಿಂದ, ಇದರ ಬಗ್ಗೆ ಗಮನಹರಿಸಿ, ಎಲ್ಲಾ ವಿದ್ಯಾರ್ಥಿಗಳಿಗೂ ಬಿಸಿಯಾದ ಸುರಕ್ಷಿತ ಆಹಾರವನ್ನು ನೀಡುವ ಕ್ರಮ ಕೈಗೊಳ್ಳುವುದು.

6. ವಿದ್ಯಾರ್ಥಿ ನಿಲಯಗಳ ಶೌಚಾಲಯ, ಸ್ನಾನದಕೋಣೆಯನ್ನು ಸ್ವಚ್ಛವಾಗಿಡಬೇಕು.

7. ಬೇಸಿಗೆ ಸಂದರ್ಭದಲ್ಲಿ ನಿರ್ಜಲೀಕರಣ (Dehydration) ಆಗುವ ಸಾಧ್ಯತೆ ಇರುವುದರಿಂದ, ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಿ ಎಲ್ಲರೂ ಶುದ್ಧ ನೀರು, ದ್ರವ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವಂತೆ ಜಾಗೃತಿ ವಹಿಸಬೇಕು.

8.ಅಡುಗೆ ಕೋಣೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರತಿದಿನ ಸೂಕ್ತ ರೀತಿಯಲ್ಲಿ ವಿಲೇವಾರಿ ನಡೆಸಬೇಕು.

9.ಯಾವುದಾದರೂ ವಿದ್ಯಾರ್ಥಿಗೆ ಅನಾರೋಗ್ಯ ಕಂಡುಬಂದಲ್ಲಿ ಕೂಡಲೇ ವೈದ್ಯಾಧಿಕರಿ, ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆಯನ್ನು ನೀಡಬೇಕು.

ಎಲ್ಲಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

ಇತ್ತೀಚೆಗೆ ಕಳಪೆ ಆಹಾರ ಪೂರೈಕೆಯಿಂದ ಸುಮಾರು 130 ರಷ್ಟು ನರ್ಸಿಂಗ್ ವಿದ್ಯಾರ್ಥಿಗಳು ಅಸ್ವಸ್ಥರಾಗಿ ಮಂಗಳೂರು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು.

 

Ads on article

Advertise in articles 1

advertising articles 2

Advertise under the article