-->
ಮಂಗಳೂರು: ರಾಜ್ಯದೆಲ್ಲೆಡೆ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮನೆಯಿಂದ ಉರಿಬಿಸಿಲಿನ ತಾಪಕ್ಕೆ ಮನೆಯಿಂದ ಆಚೆ ಬರೋದಕ್ಕೂ ಹಿಂದೇಟು ಹಾಕುವಂತಹ ಪರಿಸ್ಥಿತಿ ಕರಾವಳಿ ಭಾಗದಲ್ಲಿ ನಿರ್ಮಾಣವಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರಿಕೆ ಕಾಣುತ್ತಿದ್ದು, ದಾಖಲೆಯತ್ತ ಸಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಮಂಗಳೂರಿನಲ್ಲಿ 36.9 ಡಿ. ಸೆ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು ಇದು ದೇಶದಲ್ಲಿಯೇ ಅತ್ಯಧಿಕವಾಗಿತ್ತು. ಅಲ್ಲದೇ ಇದು ವಾಡಿಕೆಗಿಂತ 3 ಡಿ.ಸೆ ಹೆಚ್ಚಳವಾಗಿದೆ. ಇದೇ ವೇಳೆ 23.8 ಡಿ.ಸೆ ಕನಿಷ್ಠ ತಾಪಮಾನ ದಾಖಲಾಗಿದ್ದು, 1 ಡಿ.ಸೆ ಏರಿಕೆಯಾಗಿದೆ.
ಇದೀಗ ಕರಾವಳಿ ಜನರು ಬಿಸಿಲಿನಿಂದ ತಪ್ಪಿಸಿಕೊಳ್ಳೊದಕ್ಕಾಗಿ ಎಳನೀರು, ಮಜ್ಜಿಗೆ, ಕಬ್ಬಿನ ಜ್ಯೂಸ್ ಹಣ್ಣಿನ ಜ್ಯೂಸ್‌ಗಳ ಮುಖಮಾಡಿದ್ದು ಬೇಸಿಗೆಯ ಬಿಸಿಲಿನಿಂದ ಬಾಯಾರಿಗೆ ನಿಗಿಸಿಕೊಳ್ಳೋದಕ್ಕೆ ಹೆಣಗಾಡುತ್ತಿದ್ದಾರೆ.