-->
ಉಳ್ಳಾಲ: ‘ವಿಮ್’ ವತಿಯಿಂದ ವಿಶೇಷ ಚೇತನ ಮಕ್ಕಳ ಜೊತೆ ಮಹಿಳಾ ದಿನಾಚರಣೆ

ಉಳ್ಳಾಲ: ‘ವಿಮ್’ ವತಿಯಿಂದ ವಿಶೇಷ ಚೇತನ ಮಕ್ಕಳ ಜೊತೆ ಮಹಿಳಾ ದಿನಾಚರಣೆ



ಮಂಗಳೂರು: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಉಳ್ಳಾಲದ ಅದಮ್ಯ ಚೇತನಾ ದಿವ್ಯಾಂಗರ ಹಗಲು ಪಾಲನಾ ಕೇಂದ್ರದಲ್ಲಿಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.

ಸಂದರ್ಭ ಸಂಸ್ಥೆಯ ವಿಶೇಷ ಚೇತನ ಮಕ್ಕಳಿಗೆ ವಿಮ್ ಸದಸ್ಯೆಯರು ಹಣ್ಣು ಹಂಪಲು ವಿತರಿಸಿದರು. ಅಲ್ಲದೇ, ಮಕ್ಕಳ ಜೊತೆಗೆ ಸಮಯ ಕಳೆದರು. ಜೊತೆಗೆ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 

ವೇಳೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ .. ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಉಳ್ಳಾಲ ನಗರಸಭೆ ಸದಸ್ಯರಾದ ರುಖಿಯಾ, ನಿಝಾಮ್ ಹಾಗೂ ವಿಮೆನ್ ಇಂಡಿಯಾ ಮೂವ್ಮೆಂಟ್ .. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಹನಾ ಬಂಟ್ವಾಳ, ವಿಮ್ ಬಂಟ್ವಾಳ ತಾಲೂಕು ಅಧ್ಯಕ್ಷೆ ಶಾಕಿರಾ ಫರಂಗಿಪೇಟೆ, ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷೆ ಶಾಝಿಯಾ ಪರ್ವೀನ್, ಉಳ್ಳಾಲ ಕ್ಷೇತ್ರ ಕಾರ್ಯದರ್ಶಿ ಶಾಹಿನ ಕೆ.ಸಿ. ರೋಡ್, ಮಂಗಳೂರು ಉತ್ತರ ಪ್ರಧಾನ ಕಾರ್ಯದರ್ಶಿ ಹಸೀನಾ ಸುರತ್ಕಲ್, ಬಂಟ್ವಾಳ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಫೌಝಿಯಾ ಶಾಫಿ, ಅದಮ್ಯ ಚೇತನಾ ಪಾಲನಾ ಕೇಂದ್ರ ನಿರೀಕ್ಷಕಿ ವಾಣಿಶ್ರೀ, ಫಿಸಿಯೋಥೆರಪಿಸ್ಟ್ ಡಾ. ಹರ್ಷಿತಾ, ಸಹಾಯಕಿ ಫಿಸಿಯೋಥೆರಪಿಸ್ಟ್ ಡಾ. ಸವಿತಾ, ಶಿಕ್ಷಕಿ ದೀಪಿಕಾ, ಜಯಶ್ರೀ, ರವಿಕಲಾ ಹಾಗೂ ಸಿಬ್ಬಂದಿಗಳಾದ ಮುರಳೀಧರ್, ಶ್ರೀಮತಿ, ದೀಪಿಕಾ ಉಪಸ್ಥಿತರಿದ್ದರು.


Ads on article

Advertise in articles 1

advertising articles 2

Advertise under the article