ಮುಲ್ಕಿ: ಪೊಲೀಸ್ ಠಾಣೆಯಲ್ಲಿ ಮಹಿಳಾ ದಿನಾಚರಣೆ; ಹಿರಿಯ ಮಹಿಳೆಗೆ ಗೌರವ
Wednesday, March 8, 2023
ಮುಲ್ಕಿ: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಯಿತು. ಠಾಣೆಗೆ ಆಗಮಿಸಿದ್ದ ಹಿರಿಯ ಮಹಿಳೆ, ಕಿನ್ನಿಗೋಳಿಯ ಮೇರಿ ಮೋರಸ್ ರವರನ್ನು ಮಹಿಳಾ ದಿನಾಚರಣೆಯಂದು ಗೌರವಿಸಲಾಯಿತು.
ಈ ಸಂದರ್ಭ ಮುಲ್ಕಿ ಪೊಲೀಸ್ ಠಾಣೆಯ ಎಸ್ಐ ಮಾರುತಿ ಮಾತನಾಡಿ, ಮಹಿಳೆಯರಿಗೆ ಸಮಾಜದಲ್ಲಿ ಗೌರವವಿದ್ದು ಸಮಾನತೆಯ ಮೂಲಕ ಗೌರವಯುತವಾಗಿ ನಡೆಸಿಕೊಳ್ಳುವುದು ಆದ್ಯ ಕರ್ತವ್ಯ ಎಂದರು. ಮುಖ್ಯ ಅತಿಥಿಗಳಾಗಿ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಎಎಸ್ ಐ ಚಂದ್ರಶೇಖರ್, ಉಮೇಶ್, ಕೃಷ್ಣಪ್ಪ, ಸಂಜೀವ ಹಾಗೂ ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.