-->
ಮಂಗಳೂರು: ಸಿಎಸ್ಐ ಬಿಷಪ್ ಹೌಸ್ ಮಹಿಳಾ ಸೆಕ್ರೆಟರಿಗೆ ಲೈಂಗಿಕ ಕಿರುಕುಳ | ಒಡನಾಡಿ ಸಂಸ್ಥೆ ಎಂಟ್ರಿ, ಪ್ರಕರಣ ದಾಖಲು

ಮಂಗಳೂರು: ಸಿಎಸ್ಐ ಬಿಷಪ್ ಹೌಸ್ ಮಹಿಳಾ ಸೆಕ್ರೆಟರಿಗೆ ಲೈಂಗಿಕ ಕಿರುಕುಳ | ಒಡನಾಡಿ ಸಂಸ್ಥೆ ಎಂಟ್ರಿ, ಪ್ರಕರಣ ದಾಖಲು

 


ಮಂಗಳೂರು: ಮಂಗಳೂರಿನ ಬಲ್ಮಠದಲ್ಲಿರುವ ಸಿಎಸ್ಐ ಬಿಷಪ್ ಹೌಸ್ ಮಹಿಳಾ ಸೆಕ್ರೆಟರಿಗೆ  ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಸದ್ಯ ಸಂತ್ರಸ್ಥ ಮಹಿಳೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಿಳೆ ಸಿಎಸ್ಐ ಬಿಷಪ್ ಹೌಸ್ ಪ್ರಾಂತ ಕಚೇರಿಯ ಖಜಾಂಚಿ, ಕಾನೂನು ಸಲಹೆಗಾರ ಸೇರಿದಂತೆ 6 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಂತ್ರಸ್ಥ ಮಹಿಳೆ ಕಳೆದ 10 ವರ್ಷಗಳಿಂದ ಕ್ರೈಸ್ತ ಧರ್ಮದ ಪ್ರತ್ಯೇಕ ಪಂಗಡವಾದ ಚರ್ಚ್ ಆಫ್ ಸೌತ್ ಇಂಡಿಯಾ (CSI) ಬಿಷಪ್ ಹೌಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಗೆ ಕಳೆದ 4 ವರ್ಷಗಳಿಂದ ಖಜಾಂಚಿ ವಿನ್ಸೆಂಟ್ ಪಾಲನ್ನ, ಕಾನೂನು ಸಲಹೆಗಾರ ಫಾದರ್ ನೋಯಲ್ ಕರ್ಕಡ ದೈಹಿಕ, ಮಾನಸಿಕ, ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ಕೆಲಸದಿಂದ ತೆಗೆಯಲು ಯತ್ನಿಸಿರುವ ಬಗ್ಗೆ ಸಂತ್ರಸ್ಥ ಮಹಿಳೆ ಆರೋಪ ಮಾಡಿದ್ದಾರೆ.

ಮಧ್ಯಪ್ರವೇಶಿಸಿದ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ

ಇನ್ನು ಸಂತ್ರಸ್ಥ ಮಹಿಳೆ ಮೈಸೂರಿನ ಒಡನಾಡಿ ಸಂಸ್ಥೆಗೂ ದೂರು ನೀಡಿದ್ದಾರೆ. ಹಿನ್ನೆಲೆ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟ್ಯಾನ್ಲಿ ಸಂತ್ರಸ್ಥೆಯನ್ನು ಖುದ್ದು ಭೇಟಿಯಾಗಿದ್ದಾರೆ. ಸದ್ಯ ಸ್ಟ್ಯಾನ್ಲಿ ಸಂತ್ರಸ್ಥ ಮಹಿಳೆಯ ಬೆಂಬಲಕ್ಕೆ ನಿಂತಿದ್ದಾರೆ. ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಪಿಸಿ 1860(U/s-354(A), 354(D), 506, 34, 504, 354 ಕಲಂ ಅಡಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.

Ads on article

Advertise in articles 1

advertising articles 2

Advertise under the article