ಮುಲ್ಕಿ: ʼವಿಜಯ ಸಂಕಲ್ಪ ಯಾತ್ರೆʼ ಹಿನ್ನೆಲೆ; ಕಿನ್ನಿಗೋಳಿಯಲ್ಲಿ ರಸ್ತೆ ಸಂಚಾರ ಬದಲಾವಣೆ
ಮುಲ್ಕಿ: ಇಂದು (ಮಾರ್ಚ್ 13) ಮುಲ್ಕಿ ಮೂಡುಬಿದಿರೆ ವಿಧಾನಸಭೆ ವ್ಯಾಪ್ತಿಯ
ಕಿನ್ನಿಗೋಳಿಯಲ್ಲಿ ಭಾರತೀಯ ಜನತಾ ಪಕ್ಷದ ʼವಿಜಯ ಸಂಕಲ್ಪ ಯಾತ್ರೆʼ ಕಾರ್ಯಕ್ರಮ ಆಯೋಜನೆ ಹಿನ್ನೆಲೆ
ಕಿನ್ನಿಗೋಳಿ ಆಸುಪಾಸಿನ ರಸ್ತೆ ಸಂಚಾರದಲ್ಲಿ ಬದಲಾವಣೆ ನಡೆಸಿ ಮಂಗಳೂರು ಪೊಲೀಸ್ ಕಮೀಷನರ್ ಆದೇಶಿಸಿದ್ದಾರೆ.
ಮಧ್ಯಾಹ್ನ 2.30ರ ವೇಳೆಗೆ ಪಾವಂಜೆ ದೇವಸ್ಥಾನದಿಂದ ಬೈಕ್ ಜಾಥಾವು
ಹೊರಡಲಿದ್ದು, ಹಳೆಯಂಗಡಿ, ಪಕ್ಷಿಕೆರೆ ಮಾರ್ಗವಾಗಿ ಸಂಚರಿಸಲಿದೆ. ಬಳಿಕ, ಕಿನ್ನಿಗೋಳಿಯ ರಾಜಾಂಗಣ
ತಲುಪಲಿದೆ. ಬೈಕ್ ಜಾಥಾದಲ್ಲಿ 250 ರಿಂದ 300ರ ವರೆಗಿನ ಬೈಕ್ ಭಾಗವಹಿಸಲಿವೆ.
ಇನ್ನು ಮಧ್ಯಾಹ್ನ 3 ಗಂಟೆ ಸುಮಾರಿಗೆ ರಾಜಾಂಗಣದಿಂದ 2ಕಿಲೋ ಮೀಟರ್
ದೂರದ ಮೂರು ಕಾವೇರಿವರೆಗೆ ವಿಜಯ ಸಂಕಲ್ಪ ಯಾತ್ರೆಯ ಮೆರವಣಿಗೆ ಹೊರಡಲಿದೆ.
ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ
ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.
ಹೀಗಿವೆ ರೂಟ್
ಬದಲಾವಣೆ
1. ಮುಲ್ಕಿಯಿಂದ ಮೂಡುಬಿದಿರೆ ಕಡೆಗೆ ತೆರಳುವವರು ಏಳಿಂಜೆ, ಕುಕ್ಕಟ್ಟೆಯಿಂದ ಮೂರು ಕಾವೇರಿ ಮಾರ್ಗವಾಗಿ ಬಂದು ಮೂಡುಬಿದಿರೆಗೆ ತೆರಳಬೇಕಾಗುತ್ತವೆ.
2. ಕಾರ್ಕಳದಿಂದ ಮಂಗಳೂರು ಕಡೆಗೆ ಬರುವವರು ಮೂರುಕಾವೇರಿಯಿಂದ ಕಟೀಲು-ಬಜ್ಪೆ
ಮಾರ್ಗವಾಗಿ ಸಂಚರಿಸುವುದು.